ಸುರೇಬಾನ: ಪ್ರಸ್ತುತ ಹಂಗಾಮಿನ ಕೃಷಿ ಚಟುವಟಿಗಳಿಗೆ ಕೃಷಿ ಪರಿಕಗಳ ಅಗತ್ಯ ದಾಸ್ತಾನು ಇದೆ. ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.
ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮುಂಗಾರು ಹಂಗಾಮಿನ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ಎಸ್.ಎ್.ಬೆಳವಟಗಿ ಮಾತನಾಡಿ, ಪೂರ್ವ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಬಿತ್ತನೆಗೆ ಅನುಕೂಲಕರವಾಗಿದೆ. ಎಲ್ಲ ರೈತ ಸಂಪರ್ಕ ಕೇಂದ್ರ ಮತ್ತು ವಿವಿಧೋದ್ದೇಶ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಲ್ಲಿ ಹೆಸರು, ಉದ್ದು, ತೊಗರಿ, ಗೋವಿನಜೋಳ, ಸಜ್ಜೆ ಹಾಗೂ ಸೂರ್ಯಕಾಂತಿ ಬೆಳೆಯ ಪ್ರಮಾಣಿಕೃತ ಬೀಜ ಲಭ್ಯ ಇವೆ. ರಸಗೊಬ್ಬರ ದಾಸ್ತಾನಿಗೆ ಸಂಬಂಧಿಸಿದಂತೆ ಅಗತ್ಯ ದಾಸ್ತಾನು ಇದೆ. ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಕಾಂಪ್ಲೆಕ್ಸ್ ಗೊಬ್ಬರ ಬಳಸಲು ಸಲಹೆ ನೀಡಿದರು.
ಜಾಲಿಕಟ್ಟಿ ಗ್ರಾಮದಲ್ಲಿ ಸಾಲ ಭಾದೆಯಿಂದ ಈಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಸಿದ್ಧಪ್ಪ ಭರಮಪ್ಪ ಕಲ್ಲೂರ ಕುಟುಂಬಕ್ಕೆ 5 ಲಕ್ಷ ರೂ. ಮೊತ್ತದ ಧೃಡೀಕರಣ ಪತ್ರ ವಿತರಿಸಿದರು.
ಮುಖಂಡರಾದ ಶಂಕರಯ್ಯ ಚಿಕ್ಕಮಠ, ಸತೀಶ ಕೋಟಗಿ, ಶಿವಾನಂದ ಚಿಕ್ಕನಗೌಡ್ರ, ಶಿವಪ್ಪ ಮೇಟಿ, ಹನಮಂತ ಬೆಳದಡಿ, ಜಿ.ಬಿ ರಂಗನಗೌಡ್ರ, ಸಿದ್ಲಿಂಗಪ್ಪ ಶಿಂಗಾರಿಕೊಪ್ಪ, ಕೃಷಿ ಅಧಿಕಾರಿಗಳಾದ ನವೀನಕುಮಾರ ಪಾಟೀಲ, ಗೋವಿಂದರಡ್ಡಿ ಜಾಯನ್ನವರ, ಆರ್.ವಿ.ದಾಸರ, ಸಂಗಮೇಶ ಜಲಗೇರಿ, ಶ್ರೀಶೈಲ ಪಾಟೀಲ, ಈರಣ್ಣ ಬೆಳವಣಕಿ, ಶಂಕ್ರಪ್ಪ ರಾಚಪ್ಪಗೋಳ, ಜಗದೀಶ ದಂಡಿನ ಇತರರಿದ್ದರು.