ಜಿಲ್ಲೆ

ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಆರಂಭ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮೇ ಕೊನೆಯ ವಾರದಿಂದಲೇ ಕೊಡಗಿನಲ್ಲಿ ಮಳೆಗಾಲದ ವಾತಾವರಣ ಕಾಣಿಸಿಕೊಂಡಿದ್ದು ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗುತ್ತಿರುವುದರಿಂದ ಈ ಬಾರಿ ಕೃಷಿಗೆ ಅನುಕೂಲಕರ ಸನ್ನಿವೇಶ ನಿರ್ಮಾಣ ಆಗಿದೆ. ರೈತರು ಈಗಾಗಲೇ ಮುಂಗಾರು ಅವಧಿಯ ಬೇಸಾಯಕ್ಕೆ ಪೂರ್ವ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಇಲಾಖೆಯೂ ಈ ಕೃಷಿ ಹಂಗಾಮಿಗೆ ಭರದ ಸಿದ್ಧತೆ ನಡೆಸಿದ್ದು, ರೈತರಿಗೆ ಪೂರೈಕೆ ಮಾಡಲು ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇಟ್ಟುಕೊಳ್ಳಲಾಗಿದೆ.

ಪಶ್ಚಿಮಘಟ್ಟದ ಸೆರಗಿನಲ್ಲಿರುವ ಪುಟ್ಟ ಜಿಲ್ಲೆ ಕೊಡಗು ಪ್ರವಾಸಿ ತಾಣವಾಗಿ ಇತ್ತೀಚಿನ ವರ್ಷಗಳಲ್ಲಿ ಹೆಸರು ಮಾಡುತ್ತಿದ್ದರೂ ಬಹುತೇಕ ಸ್ಥಳೀಯರು ಮೂಲ ಕಸುಬು ವ್ಯವಸಾಯವನ್ನು ಮರೆತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕಾಫಿ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ತೋಟಗಳಾಗಿ ಭತ್ತದ ಗದ್ದೆಗಳು ಪರಿವರ್ತನೆಗೊಂಡಿವೆ. ಹಲವು ಕಡೆಗಳಲ್ಲಿ ಕೃಷಿ ಭೂಮಿ ವಾಣಿಜ್ಯ ಉದ್ದೇಶಕ್ಕಾಗಿ ಪರಿವರ್ತನೆಗೊಂಡು ಲೇಔಟ್, ರೆಸಾರ್ಟ್ ಸೇರಿದಂತೆ ಕಾಂಕ್ರಿಟ್ ಕಾಡು ಕೂಡ ಬೆಳೆದು ನಿಂತಿದೆ. ಈ ಎಲ್ಲಾ ಸವಾಲುಗಳ ಮಧ್ಯೆಯೂ ಕೃಷಿಕರು ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದು ಮಳೆ ಆರಂಭವಾಗುತ್ತಿದ್ದAತೆಯೇ ತಮ್ಮ ಕರ್ತವ್ಯ ಶುರು ಮಾಡಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಪ್ರಮುಖವಾಗಿ ಭತ್ತ ಮತ್ತು ಮುಸುಕಿನ ಜೋಳ ಬೆಳೆಯಲಾಗುತ್ತದೆ. ಕುಶಾಲನಗರ ಒಳಗೊಂಡು ಸೋಮವಾರಪೇಟೆ ತಾಲೂಕಿನ ಅಲ್ಲಲ್ಲಿ ರಾಗಿಯನ್ನೂ ಬೆಳೆಯುತ್ತಾರೆ. ಮಾರ್ಚ್, ಏಪ್ರಿಲ್‌ನಲ್ಲಿ ಒಣಗಿದ್ದ ಭೂಮಿ ಮೇ ಕೊನೆಯ ವಾರದಿಂದ ಈಚೆಗೆ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ನೆನೆದು ಒಂದು ಹದಕ್ಕೆ ಬಂದಿರುವುದರಿAದ ಭತ್ತದ ಬಿತ್ತನೆ ಮತ್ತು ನಾಟಿಯ ಪೂರ್ವ ಸಿದ್ಧತಾ ಕೆಲಸಗಳನ್ನು ನಿರ್ವಹಿಸಲು ಪೂರಕ ವಾತಾವರಣ ನಿರ್ಮಾಣ ಆಗಿದೆ. ಅಲ್ಲಲ್ಲಿ ಟ್ರಾö್ಯಕ್ಟರ್ ಬಳಸಿ ಮತ್ತು ಎತ್ತುಗಳ ಸಹಾಯದಿಂದ ಭೂಮಿ ಉಳುಮೆ ಮಾಡುವ ದೃಶ್ಯ ಕಂಡು ಬರುತ್ತಿದೆ.

ಕೃಷಿ ಇಲಾಖೆ ಕೂಡ ರೈತರ ಬೇಡಿಕೆಗೆ ಅನುಗುಣವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 30,525 ಹೆಕ್ಟೇರ್ ಪ್ರದೇಶದಲ್ಲಿ ವ್ಯವಸಾಯದ ಗುರಿ ಹೊಂದಲಾಗಿದೆ. ಈ ಪೈಕಿ 29,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆ. ಮಡಿಕೇರಿ ತಾಲೂಕಿನಲ್ಲಿ 6,000 ಹೆಕ್ಟೇರ್, ಅವಿಭಜಿತ ಸೋಮವಾರಪೇಟೆ ತಾಲೂಕಿನಲ್ಲಿ 2,400 ಹೆಕ್ಟೇರ್, ಅವಿಭಜಿತ ವಿರಾಜಪೇಟೆ ತಾಲೂಕಿನಲ್ಲಿ 13,500 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ ಮತ್ತು ಅವಿಭಜಿತ ಸೋಮವಾರಪೇಟೆ ತಾಲೂಕಿನ ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯ ವ್ಯಾಪ್ತಿಯ 2,400 ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಆಶ್ರಿತದಲ್ಲಿ ಭತ್ತ ಬೆಳೆಯಲಾಗುವುದು.

ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕೆಲವು ಕಡೆ ಮುಸುಕಿನ ಜೋಳ ಮತ್ತು ರಾಗಿ ಕೂಡ ಬೆಳೆಯಲಾಗುತ್ತದೆ. ಅವಿಭಜಿತ ಸೋಮವಾರಪೇಟೆ ತಾಲೂಕಿನಲ್ಲಿ 1,500 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಮತ್ತು 25 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯುವ ಗುರಿಯನ್ನು ಕೃಷಿ ಇಲಾಖೆ ಇಟ್ಟುಕೊಂಡಿದೆ. ಈ ಭಾಗಕ್ಕೆ 29.18 ಕ್ವಿಂಟಾಲ್ ಮುಸುಕಿನ ಜೋಳದ ಬಿತ್ತನೆ ಬೀಜದ ಅಗತ್ಯತೆ ಇದ್ದು, 7.70 ಕ್ವಿಂಟಾಲ್ ಸರಬರಾಜು ಆಗಿದೆ. 2.76 ಟನ್ ಬಿತ್ತನೆ ಬೀಜ ವಿತರಿಸಲಾಗಿದ್ದು, 4.84 ಟನ್ ರೈತರಿಗೆ ತಲುಪಿಸಲು ಬಾಕಿ ಇದೆ.

1,648.16 ಕ್ವಿಂಟಾಲ್ ಸಾಮಾನ್ಯ ಮತ್ತು 30.92 ಕ್ವಿಂಟಾಲ್ ಹೈಬ್ರಿಡ್ ಭತ್ತದ ಬೀಜ ರೈತರಿಗೆ ವಿತರಿಸುವ ಗುರಿಯನ್ನು ಕೃಷಿ ಇಲಾಖೆ ಇಟ್ಟುಕೊಂಡಿದೆ. ಈ ಪೈಕಿ 1576.25 ಕ್ವಿಂಟಾಲ್ ಸಾಮಾನ್ಯ ಭತ್ತದ ಬೀಜ ಸರಬರಾಜಾಗಿದ್ದು, 696.25 ಕ್ವಿಂಟಾಲ್ ರೈತರಿಗೆ ವಿತರಿಸಲಾಗಿದೆ. 880 ಕ್ವಿಂಟಾಲ್ ವಿತರಣೆಗೆ ಬಾಕಿ ಇದೆ. ಭತ್ತದ ಹೈಬ್ರಿಡ್ ಬೀಜ ಇನ್ನಷ್ಟೇ ಪೂರೈಕೆ ಆಗಬೇಕಿದೆ. ರಾಜ್ಯ ಬೀಜ ನಿಗಮ, ರಾಷ್ಟಿçÃಯ ಬೀಜ ನಿಗಮ ಹಾಗೂ ಖಾಸಗಿ ಕಂಪೆನಿಗಳಿAದ ಭತ್ತದ ಬೀಜ ತರಿಸಿಕೊಡಲಾಗುತ್ತಿದೆ. ಪ್ರಮುಖವಾಗಿ ಐಆರ್ 64, ತುಂಗಾ, ತನು, ಉಮಾ, ಆರ್‌ಎನ್‌ಆರ್14058, ಅಖಿರಾ ತಳಿಯ ಭತ್ತದ ಬೀಜಗಳನ್ನು ರೈತರಿಗೆ ವಿತರಿಸಲಾಗುತ್ತಿದೆ.

ಭತ್ತದ ಬಿತ್ತನೆ ಮತ್ತು ನಾಟಿ ಕಾರ್ಯ ಜೂನ್ ಅಂತ್ಯದಿAದಲೇ ಅಲ್ಲಲ್ಲಿ ಶುರುವಾಗಿದ್ದು ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲೂ ಮುಂದುವರಿಯುತ್ತದೆ. ಮುಸುಕಿನ ಜೋಳದ ಬಿತ್ತನೆ ಕಾರ್ಯ ಬಹುತೇಕ ಮುಗಿದಿದೆ. ಜಿಲ್ಲೆಯಲ್ಲಿರುವ 16 ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅವಶ್ಯವಿರುವ ವಿವಿಧ ತಳಿಯ ಭÀತ್ತದ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು ಸಬ್ಸಿಡಿ ದರದಲ್ಲಿ ಪೂರೈಕೆ ಮಾಡಲಾಗುತ್ತದೆ.

ಬಿತ್ತನೆ ಬೀಜದ ಜತೆಗೆ ರೈತರಿಗೆ ರಸಗೊಬ್ಬರದ ಅಗತ್ಯವೂ ಇದ್ದು, ಒಟ್ಟು 88,677 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದೆ. ಈ ಪೈಕಿ 19,803 ಮೆ.ಟ. ಯೂರಿಯಾ, 8,191 ಮೆ.ಟ. ಡಿಎಪಿ, 17,988 ಮೆ.ಟ. ಎಂ.ಒ.ಪಿ, 41,565 ಮೆ.ಟ. ಕಾಂಪ್ಲೆಕ್ಸ್ ಹಾಗೂ 1150 ಮೆ.ಟ. ಎಸ್‌ಎಸ್‌ಪಿ ರಸಗೊಬ್ಬರದ ಅಗತ್ಯತೆಗೆ ಕೊಡಗಿಗೆ ಇದೆ. ಸದ್ಯ ಎಲ್ಲಾ ರಸಗೊಬ್ಬರಗಳು ಸೇರಿ ಒಟ್ಟು 39,865 ಮೆಟ್ರಿಕ್ ಟನ್ ರಸಗೊಬ್ಬರ ಜಿಲ್ಲೆಯಲ್ಲಿ ದಾಸ್ತನು ಇದೆ.

ಸಾಮಾನ್ಯವಾಗಿ ಕೊಡಗಿನಲ್ಲಿ ಭತ್ತದ ಬೆಳೆಗೆ ಬೆಂಕಿ ರೋಗದ ಬಾಧೆ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ರೈತರು ಬಿತ್ತನೆ ಅವಧಿಯಲ್ಲೇ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ತಜ್ಞರು ಸಲಹೆ ಕೊಡುತ್ತಾರೆ. ಬಿತ್ತನೆಗೆ ಮೊದಲು ಕಾರ್ಬನ್‌ಡೈಜಿಂ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದು ಸೂಕ್ತವಾಗಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು. ದೀರ್ಘಾವಧಿ ತಳಿಗಳಾದ ಇಂಟಾನ್, ತುಂಗಾ, ಅತಿರಾ, ಬಿ.ಆರ್. 2655 ತಳಿ ಭತ್ತಗಳನ್ನು ಆದಷ್ಟು ಬೇಗ ಬಿತ್ತನೆ ಮಾಡಬೇಕು. ಮಧ್ಯಮಾವಧಿ ತಳಿಗಳಾದ ಐ.ಇ.ಟಿ.7191, ಜಯ, ಎಂ.ಟಿ.ಯು 1001 ತಳಿಗಳ ಬಿತ್ತನೆ ಜುಲೈ ಮೊದಲ ವಾರದಲ್ಲಿ ಮುಗಿಸಬೇಕು. ಅಲ್ಪಾವಧಿ ತಳಿಗಳಾದ ಐ.ಆರ್.64, ಹೈಬ್ರೀಡ್ ಭತ್ತಗಳನ್ನು ಜುಲೈ ಮೊದಲನೇ ವಾರದ ನಂತರ ಬಿತ್ತನೆಗೆ ಬಳಸುವುದು ಸೂಕ್ತವಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಈ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 30,525 ಹೆಕ್ಟೇರ್ ಪ್ರದೇಶದಲ್ಲಿ ವ್ಯವಸಾಯದ ಗುರಿ ಹೊಂದಲಾಗಿದೆ. ಈ ಪೈಕಿ 29,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆ. 1,648.16 ಕ್ವಿಂಟಾಲ್ ಸಾಮಾನ್ಯ ಮತ್ತು 30.92 ಕ್ವಿಂಟಾಲ್ ಹೈಬ್ರಿಡ್ ಭತ್ತದ ಬೀಜ ರೈತರಿಗೆ ವಿತರಿಸುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಜಿಲ್ಲೆಯಲ್ಲಿರುವ 16 ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅವಶ್ಯವಿರುವ ವಿವಿಧ ತಳಿಯ ಭತ್ತದ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು ಸಬ್ಸಿಡಿ ದರದಲ್ಲಿ ಲಭ್ಯವಿದೆ.

ಚಂದ್ರಶೇಖರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ