ವಿಜಯಪುರದ ಬಿಎಲ್​ಡಿಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್​ ವಿದ್ಯಾಲಯವು ಬೆಂಗಳೂರಿನ ಟೊಯೋಟಾ ಇಂಡಸ್ಟ್ರೀಸ್​ ಇಂಜಿನ್​ ಇಂಡಿಯಾ ಪೆವೇಟ್​ ಲಿ., ಜತೆಗೆ ಉದ್ಯೋಗ ಮತ್ತು ತರಬೇತಿ ಒಡಬಂಡಿಕೆ ಒಪ್ಪಂದಕ್ಕೆ ಸಹಿ ಮಾಡಿಕೊಳ್ಳಲಾಯಿತು. ಅಮಿತ ಜೈನ್​, ಶ್ರೀಧರ ಎಚ್​.ಎಸ್​., ಪಿ.ಬಿ. ಕಳಸಗೊಂಡ ಮತ್ತಿತರರಿದ್ದಾರೆ. 
ಜಿಲ್ಲೆ

ಬಿಎಲ್​ಡಿಇ ಪಾಲಿಟೆಕ್ನಿಕ್​ & ಟೊಯೋಟಾ ಸಂಸ್ಥೆಯೊಂದಿಗೆ ಒಪ್ಪಂದ

ಗಿರೀಶ ಸಗರ

ವಿಜಯಪುರ: ನಗರದ ಬಿಎಲ್​ಡಿಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್​ ವಿದ್ಯಾಲಯವು ಬೆಂಗಳೂರಿನ ಟೊಯೋಟಾ ಇಂಡಸ್ಟ್ರೀಸ್​ ಇಂಜಿನ್​ ಇಂಡಿಯಾ ಪೆವೇಟ್​ ಲಿ., ಜತೆಗೆ ಉದ್ಯೋಗ ಮತ್ತು ತರಬೇತಿ ಒಡಬಂಡಿಕೆ ಒಪ್ಪಂದಕ್ಕೆ ಸಹಿ ಮಾಡಿಕೊಂಡಿತು.

ಇಲ್ಲಿನ ಪಾಲಿಟೆಕ್ನಿಕ್​ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಟೊಯೋಟಾ ಇಂಡಸ್ಟ್ರೀಸ್​ ಇಂಜಿನ್​ ಇಂಡಿಯಾ ಪ್ರೆವೇಟ್​ ಲಿ., ಅಧ್ಯಕ್ಷ ಅಮಿತ ಜೈನ್​, ವ್ಯವಸ್ಥಾಪಕ ಶ್ರೀಧರ ಎಚ್​.ಎಸ್​., ಮತ್ತು ಹಿರಿಯ ಅಧಿಕಾರಿ ಪ್ರವಿಣ ಕುಮಾರ ಹಾಗೂ ಬಿಎಲ್​ಡಿಇ ಸಂಸ್ಥೆಯ ಆಡಳಿತಾಧಿಕಾರಿ ವಿಲಾಸ ಬಗಲಿ, ವಿದ್ಯಾಲಯದ ಪ್ರಾಚಾರ್ಯ ಪಿ.ಬಿ. ಕಳಸಗೊಂಡ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಭಾಗವಹಿಸಿ ಒಡಂಬಡಿಕೆ ಪ್ರಕ್ರಿಯೆ ನೆರವೇರಿಸಿದರು.

ಉಪನ್ಯಾಸಕ ಎನ್​.ಟಿ. ಬಿರಾದಾರ ವಿದ್ಯಾಲಯದ ಕುರಿತು ಸುದೀರ್ ಮಾಹಿತಿ ನೀಡಿದರು. ಟೊಯೋಟಾ ಇಂಡಸ್ಟ್ರೀಸ್​ ಅಧ್ಯಕ್ಷ ಅಮಿತ ಜೈನ್​ ಕಂಪನಿಯು ಬೆಳೆದು ಬಂದ ಇತಿಹಾಸ ವಿವರಿಸುವ ಜತೆಗೆ ಕಂಪನಿಯ ವ್ಯಾಪಾರ ವಹಿವಾಟು ವಿಸ್ತೀರ್ಣ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಕಂಪನಿಯು ನೇಮಕಾತಿ ಮಾಡಿಕೊಂಡ ಉದ್ಯೋಗಿಗಳಿಗೆ ಮೂಲ ಸೌಲಭ್ಯ ಒದಗಿಸುವುದು. ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವುದರ ಮೂಲಕ ಉತ್ತಮ ವೇತನ, ಆರೋಗ್ಯ ವಿಮಾ ಮತ್ತಿತರ ಸೌಲಭ್ಯ ನೀಡುತ್ತಿರುವ ಕುರಿತು ಹೇಳಿದರು.

ಇನ್ನು ಮುಂದೆ ನಮ್ಮ ಕಂಪನಿಯಿಂದ ವಿದ್ಯಾಲಯದ ಸಿಬ್ಬಂದಿಗಳಿಗೆ ತರಬೇತಿ ನೀಡುವುದು, ಚರ್ಚೆ ಮಾಡುವುದು ಮತ್ತು ಸದಾ ಸಂಪರ್ಕದಲ್ಲಿರುವುದು. ವಿದ್ಯಾರ್ಥಿಗಳಿಗೆ ತಮ್ಮ ಕಂಪನಿ ಪ್ರತಿನಿಧಿಗಳಿಂದ ಮೇಲಿಂದ ಮೇಲೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವುದು, ಉದ್ಯೋಗ ೇತ್ರದಲ್ಲಿ ಬರುವ ಸವಾಲು ಮತ್ತು ಅವುಗಳನ್ನು ಎದುರಿಸುವ ಕುರಿತು ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗುವುದು, ಉದ್ಯೋಗ ಸೌಲಭ್ಯ ಒದಗಿಸುವುದು ಸೇರಿ ಹೀಗೆ ಹಲವು ಒಪ್ಪಂದಗಳಿಗೆ ಎರಡು ಸಂಸ್ಥಗಳ ಮುಖ್ಯಸ್ಥರುಗಳಿಂದ ಒಡಂಬಡಿಕೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.

ಉಪನ್ಯಾಸಕಿ ಶಿಲ್ಪಾ ಜಗದಾಳೆ ಸ್ವಾಗತಿಸಿದರು. ಶ್ರೇಯಾ ಪಾಟೀಲ ವಂದಿಸಿದರು.