ಕುಶಾಲನಗರ: ಕುಶಾಲನಗರದ ಬೃಂದಾವನ ಬಡಾವಣೆಯಲ್ಲಿ 78ನೇ ಸ್ವಾತಂತ್ರೊೃೀತ್ಸವವನ್ನು ಗುರುವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಹು.ರಾ.ನಾಗೇಶ್, ಭಾರತಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಭಿನ್ನಮತಕ್ಕಿಂತ ಸಹಮತ ಅವಶ್ಯಕತೆ ಎಂದರು. ದೇಶ ಪ್ರಗತಿಪಥದಲ್ಲಿ ಮುನ್ನಡೆಯುತ್ತಿರುವ ಈ ದಿನಮಾನಗಳಲ್ಲಿ ನಾವೆಲ್ಲ ಒಂದು ಎಂದು ತೋರಿಸುವ ಮೂಲಕ ರಾಷ್ಟ್ರದ ಪ್ರಗತಿಗೆ ಕಂಕಣಬದ್ಧರಾಗಿ ದುಡಿಯಬೇಕೆಂದು ಸಲಹೆ ನೀಡಿದರು.
ಉಪನ್ಯಾಸಕ ಹಂಡ್ರಂಗಿ ನಾಗರಾಜ್ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಮುನ್ನಡೆಸುತ್ತಿರುವ ದೇಶದ ಭಾವೈಕ್ಯತೆಯ ಬಂಧನವನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಪೂವಯ್ಯ, ರಮೇಶ್, ಅಪ್ಪಣ್ಣ, ಸೋಮಪ್ಪ ಮತ್ತಿತರರಿದ್ದರು.
ದೇಶಭಕ್ತಿ ಗೀತ ಗಾಯನವನ್ನು ಉಮಾದೇವಿ ಸೋಮಪ್ಪ, ವನಿತಾ ಕಾಳಪ್ಪ, ರಾಣಿ ನಾಗರಾಜ್, ಲೀಲಾ ಮಹೇಂದ್ರ, ಪ್ರೇಮಾ ಅಪ್ಪಣ್ಣ, ಮೀನಾಕ್ಷಿ ಶಿವಪ್ಪ, ನಡೆಸಿಕೊಟ್ಟರು.
ಯುವಕ ಸಂಘದ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಪ್ರವೀಣ್ ಕುಮಾರ್, ಆಕರ್ಷಗೌಡ, ಪುನೀತ್, ರೋಹನ್ ಎನ್ರಾಜ್, ಮುಖಂಡರಾದ ಜಗನ್ನಾಥ್, ದೇವಪ್ಪ, ಎಂ.ಎನ್.ಕಾಳಪ್ಪ, ಗಾನವಿ ಉಪಸ್ಥಿತರಿದ್ದರು.