ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರ ದೇಸಿ ಸಂಸ್ಥೆ ಸೇರಿದಂತೆ ಇನ್ನಿತರ ಸಂಸ್ಥೆಯೊಂದಿಗೆ ಸರ್ಟಿಫಿಕೇಟ್ ಕೋರ್ಸ್‌ಗಾಗಿ ಶುಕ್ರವಾರ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಸಂಗೀತ ವಿಶ್ವವಿದ್ಯಾಲಯವು ಸಂಗೀತ ಮತ್ತು ಪ್ರದರ್ಶಕ ಕಲೆಗಳ ಹಲವು ಪ್ರಕಾರಗಳಲ್ಲಿ ಶಿಕ್ಷಣವನ್ನು ನೀಡುವ ಧ್ಯೇಯದೊಂದಿಗೆ ಆರು ಸಂಸ್ಥೆಗಳೊಂದಿಗೆ ಕುಲಪತಿ ಪ್ರೊ.ನಾಗೇಶ್ ಬೆಟಕೋಟೆ ಅಧ್ಯಕ್ಷತೆಯಲ್ಲಿ ಒಡಂಬಡಿಕೆ ಕಾರ್ಯ ನೆರವೇರಿತು.
ಹಂಸಲೇಖ ದೇಸಿ ವಿದ್ಯಾಸಂಸ್ಥೆಯು ಜಾನಪದ ಐಧನಿ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಚಲನಚಿತ್ರ ಸುಗಮ ಸಂಗೀತ ಸರ್ಟಿಫಿಕೇಟ್ ಕೋರ್ಸ್‌ಗಳಿಗಾಗಿ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಇವರೊಂದಿಗೆ ಬೆಂಗಳೂರಿನ ಶ್ರೀದಕ್ಷ ಅಕಾಡೆಮಿ, ಕೈಲಾಸ ಕಲಾಧರ, ಶಿವಮೊಗ್ಗದ ನಟನಂ ಬಾಲ ನಾಟ್ಯ ಕೇಂದ್ರ, ನಾಟ್ಯ ತರಂಗ ಟ್ರಸ್ಟ್ ಸಾಗರ, ಠಾಗೂರ್ ಕಲ್ಚರಲ್ ಅಕಾಡೆಮಿ ಬೆಂಗಳೂರು ಸಹ ಒಡಂಬಡಿಕೆಗೆ ಸಹಿ ಮಾಡಲಾಯಿತು.
ಸಂಗೀತ ವಿಶ್ವವಿದ್ಯಾಲಯದೊಂದಿಗೆ ಈಗಾಗಲೇ 33 ಸಂಸ್ಥೆಗಳ ಒಡಂಬಡಿಕೆ ಮಾಡಿಕೊಂಡಿದ್ದು, 2023-24ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 39 ಸಂಸ್ಥೆಗಳು ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಂತಾಗಿದೆ.
ಇದರಿಂದಾಗಿ ವಿಶ್ವವಿದ್ಯಾಲಯವು ರಾಜ್ಯಾದ್ಯಂತ ತನ್ನ ಕೇಂದ್ರಗಳನ್ನು ಸ್ಥಾಪಿಸಿ ಸಂಗೀತಾಧಿ ಪ್ರದರ್ಶನ ಕಲೆಗಳ ಶಿಕ್ಷಣ ನೀಡುವ ಮಹತ್ತರವಾದ ಹೆಜ್ಜೆ ಇಟ್ಟಂತಾಗಿದೆ.