ಹುಬ್ಬಳ್ಳಿ: ಶ್ರೀಸ್ವಾಮಿ ಸಮರ್ಥ ಚಿನ್ಮಯ ಪಾದುಕಾಮಠ (ಬಾಳಪ್ಪ ಮಠ), ಅಕ್ಕಲಕೋಟೆಯ ವಿಶ್ವ ಫೌಂಡೇಷನ್ ಮತ್ತು ನಗರದ ಶಿವ ಯೋಗ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮವನ್ನು ಇಲ್ಲಿಯ ವಿದ್ಯಾನಗರ ಜಯನಗರದಲ್ಲಿರುವ ಈಶ್ವರ ದೇವಸ್ಥಾನ ಸಾಂಸತಿಕ ಭವನದಲ್ಲಿ ಜ. 20ರಂದು ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ.
ಅಗ್ನಿಹೋತ್ರ ಮತ್ತು ಧ್ಯಾನದ ನೇತೃತ್ವವನ್ನು ವಿಶ್ವ ಫೌಂಡೇಷನ್ ಅಧ್ಯಕ್ಷ ಡಾ. ಪುರುಷೋತ್ತಮಜಿ ರಾಜಿಮ್ವಾಲೆ ಮಹಾರಾಜ ಅವರು ವಹಿಸುವರು.
ಅಗ್ನಿಹೋತ್ರಕ್ಕೆ ಬೇಕಾದ ವಸ್ತುಗಳನ್ನು ಒದಗಿಸಲಾಗುತ್ತದೆ. ಈ ದೈವಿಕ ಆಚರಣೆಯ ಮೂಲಕ 2024ರ ಹೊಸ ವರ್ಷ ಸ್ವಾಗತಿಸಲಾಗುವುದು. ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇರುತ್ತದೆ ಎಂದು ಆಯೋಜಕ ಮುತ್ತುರಾಜ ಮಡಿವಾಳರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.