ಮಡಿಕೇರಿ: ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ಆಗ್ನೇಸ್ ಮುತ್ತಣ್ಣ ಮತ್ತು ಕಾರ್ಯದರ್ಶಿಯಾಗಿ ರಶ್ಮಿ ಪ್ರವೀಣ್ ಅಧಿಕಾರ ಸ್ವೀಕರಿಸಿದರು.
ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಇನ್ನರ್ ವೀಲ್‌ನ ನಿಕಟಪೂರ್ವ ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ ಪದಗ್ರಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭೆಯ ಪೌರಕಾರ್ಮಿಕರಾದ ಲಕ್ಷ್ಮಿ ಮತ್ತು ಲಕ್ಷ್ಮಮ್ಮ ಅವರನ್ನು ಸನ್ಮಾನಿಸಲಾಯಿತು. ರೋಟರಿ ಮಡಿಕೇರಿಯ ಅಧ್ಯಕ್ಷ ಸುದಯ್ ನಾಣಯ್ಯ ಅವರು ಲಲಿತಾರಾಘವನ್ ಸಂಪಾದಕತ್ವದಲ್ಲಿ ಪ್ರಕಟಿತ ಗಿರಿಶಂಗ ವಾರ್ತಾಸಂಚಿಕೆ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಇನ್ನರ್ ವೀಲ್ ಖಜಾಂಜಿ ದಿವ್ಯ ಮುತ್ತಣ್ಣ, ನಿಕಟಪೂರ್ವ ಅಧ್ಯಕ್ಷೆ ಕನ್ನು ದೇವರಾಜ್, ಪ್ರಮುಖರಾದ ಡಾ.ರೇಣುಕಾ ಸುಧಾಕರ್, ಲತಾ ಚೆಂಗಪ್ಪ, ಶಫಾಲ್ಲಿ ರೈ, ಗುಲಾಬಿ ಜನಾರ್ಧನ್, ನಮಿತಾ ರೈ, ರಾಧಿಕ ವಿಶ್ವನಾಥ್, ಬೊಳ್ಳು ಮೇದಪ್ಪ ಉಪಸ್ಥಿತರಿದ್ದರು.