ಕೋಟ: ಸಾಲಿಗ್ರಾಮದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಿನ್ನು ಎ.ಸಿ. ಅವರಿಗೆ ಶ್ರೀ ಅಘೋರೇಶ್ವರ ಕಲಾ ರಂಗದ ವತಿಯಿಂದ ಭಾನುವಾರ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಗತಿಪರ ಕೃಷಿಕ ಸುಬ್ರಾಯ ಗಾಣಿಗ ಬೆಟ್ಲಕ್ಕಿ ಹಾಗೂ ಉದ್ಯಮಿ ಪ್ರಕಾಶ್ ಮಧ್ಯಸ್ಥ ಧ್ವಜಾರೋಹಣ ಗೈಯ್ಯುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಯಂಕಾಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ರಮೇಶ್ ರಾವ್ ಪ್ರಶಸ್ತಿ ವಿತರಿಸಿದರು.
ಅಘೋರೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಆಡಳಿತ ಮೊಕ್ತೇಸರ ಚಂದ್ರಶೇಖರ ಕಾರಂತ, ಕೋಟ ಸಿಟಿ ರೋಟರಿ ಕ್ಲಬ್ ಅಧ್ಯಕ್ಷ ವಿಷ್ಣು ಮೂರ್ತಿ ಉರಾಳ, ಯಕ್ಷ ಸೌರಭ ಕಲಾ ರಂಗದ ಉಪಾಧ್ಯಕ್ಷ ಸತ್ಯನಾರಾಯಣ, ಕಲಾರಂಗದ ಅಧ್ಯಕ್ಷ ರಾಘವೇಂದ್ರ ನಾಯರಿ ಉಪಸ್ಥಿತರಿದ್ದರು. ಕಲಾರಂಗದ ಮಾಜಿ ಅಧ್ಯಕ್ಷ ಶಿವಾನಂದ ನಾಯರಿ ಕಾರ್ಯಕ್ರಮ ನಿರೂಪಿಸಿದರು. ಕಲಾರಂಗದ ಸ್ಥಾಪಕ ಅಧ್ಯಕ್ಷ ಉಮೇಶ್ ನಾಯರಿ ಸ್ವಾಗತಿಸಿದರು. ಕಾರ್ಯದರ್ಶಿ ರಾಧಾಕೃಷ್ಣ ಬ್ರಹ್ಮಾವರ ವಂದಿಸಿದರು.