ಸೋಮವಾರಪೇಟೆ ಸಮೀಪದ ಕುಸುಬೂರು ತೋಟದ ಮೈದಾನದಲ್ಲಿ 9ನೇ ವರ್ಷದ ಮೊಗೇರ ದೈವದ ಅಗೇಲು ಸೇವೆ ನೆರವೇರಿತು. ಹಿರಿಯರು ದೈವಗಳಿಗೆ ಎಡೆ ಅರ್ಪಿಸಿದರು 
ಜಿಲ್ಲೆ

ಮೊಗೇರ ದೈವದ ಅಗೇಲು ಸೇವೆ

ಸೋಮವಾರಪೇಟೆ: ಕುಸುಬೂರು-ಬಜೆಗುಂಡಿ ಮೊಗೇರ ಸೇವಾ ಸಮಾಜದ ಗ್ರಾಮ ಶಾಖೆಯ ವತಿಯಿಂದ ಕುಸುಬೂರು ತೋಟದ ಮೈದಾನದಲ್ಲಿ 9ನೇ ವರ್ಷದ ಮೊಗೇರ ದೈವದ ಅಗೇಲು ಸೇವೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಬಜೆಗುಂಡಿ, ಕುಸುಬೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಭಕ್ತಾದಿಗಳು ಆಗಮಿಸಿ ಮೊಗೇರ ದೈವ ಹಾಗೂ ಕೊರಗಜ್ಜ ದೈವಗಳಿಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ವಿಶೇಷ ಪೂಜೆ ನೆರವೇರಿಸಿ ಅಗೇಲು (ಎಡೆ) ಸಮರ್ಪಣೆ ಮಾಡಿದರು. ಅನ್ನದಾನ ನಡೆಯಿತು. ಗರಗಂದೂರು ಗ್ರಾಮದ ಸುಂದರ್ ಪೂಜಾರಿ ಅವರು ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದರು. ಮೊಗೇರ ಸಮಾಜದ ಜಿಲ್ಲಾ ಉಪಾಧ್ಯಕ್ಷ ದಾಮೋಧರ್, ಗ್ರಾಮ ಶಾಖೆ ಅಧ್ಯಕ್ಷ ಎಚ್.ಬಿ. ರಾಮಚಂದ್ರ, ಉಪಾಧ್ಯಕ್ಷ ತನಿಯಪ್ಪ, ಕಾರ್ಯದರ್ಶಿ ಎಂ. ಲೋಕೇಶ್, ಖಜಾಂಚಿ ಎ. ಸುರೇಶ್, ಗೌರವಾಧ್ಯಕ್ಷ ಎ. ನಾರಾಯಣ, ಪ್ರಮುಖರಾದ ನಂದಿನಿ, ಪಾಪಮ್ಮ ಸೇರಿದಂತೆ ಕಾರ್ಯಕಾರಿ ಮಂಡಳಿ ಸದಸ್ಯರು ಭಾಗವಹಿಸಿದ್ದರು.