ಜಿಲ್ಲೆ

ಉಡುಪಿಯಲ್ಲಿ ವೃದ್ಧ ಸಾವು

Udupi

ಉಡುಪಿ: ಕಾಪು ತಾಲೂಕಿನ ಪಡುಬಿದ್ರಿ ಮೂಲದ 82 ವರ್ಷದ ವ್ಯಕ್ತಿ ಸೋಮವಾರ ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದು, ಮಂಗಳವಾರ ಬಂದ ಕೋವಿಡ್ ವರದಿಯಲ್ಲಿ ಸೋಂಕು ದೃಢವಾಗಿದೆ.

ನಾಲ್ಕು ದಿನ ಹಿಂದೆ ಶ್ವಾಸಕೋಶ, ಕಿಡ್ನಿ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿಗೊಳಗಾಗಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.