ಮಂಗಳೂರು: ಅಗರಿ ಎಂಟರ್‌ಪ್ರೈಸರ್ಸ್‌ನ ಸುರತ್ಕಲ್ ಶಾಖೆಯಲ್ಲಿ ಹೊಸ ಶ್ರೇಣಿಯ ಐಎಫ್‌ಬಿ ವಾಶಿಂಗ್ ಮಶೀನ್ ಡೀಪ್‌ಕ್ಲೀನ್ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀನಿವಾಸ್ ಕಾಲೇಜಿನ ಮ್ಯಾನೇಜರ್ ಮಿಲನ್ ಕಾರಂತ್, ಶಕುಂತಳಾ ಭಟ್, ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕಿ ಕಲಾವತಿ, ಮ್ಯಾಕ್ಸಿಂ ಆಲ್ಬುಕರ್ಕ್, ಗೋವಿಂದದಾಸ್ ಕಾಲೇಜಿನ ಪ್ರಾಧ್ಯಾಪಕಿ ಅಕ್ಷತಾ ವಿ., ಫಿರೋಜ್ ಖಾನ್ ಉಪಸ್ಥಿತರಿದ್ದರು. ಐಎಫ್‌ಬಿ ಕಂಪನಿಯ ಬಿ.ಎಂ.ಆನಂದ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗುರುಪ್ರಸಾದ್, ಅಗರಿ ಅಭಿನೀತ್ ರಾವ್ , ಕಿರಣ್, ಶೇಷಶಯನ, ಸುರತ್ಕಲ್ ಶಾಖೆಯ ಮ್ಯಾನೇಜರ್ ಗುರುಪ್ರಸಾದ್, ಕೇತನ್ ಉಪಸ್ಥಿತರಿದ್ದರು. ಅಗರಿ ಎಂಟರ್‌ಪ್ರೈಸರ್ಸ್‌ನ ಮಾಲೀಕ ಅಗರಿ ರಾಘವೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.