ಮೂಡುಬಿದಿರೆ: ಅಗರಿ ಎಂಟರ್‌ಪ್ರೈಸಸ್ ವತಿಯಿಂದ ಆಯೋಜಿಸಲಾದ ಹಬ್ಬಗಳ ಉತ್ಸವ ಪ್ರತಿ ದಿನ ಒಂದು ಬಹುಮಾನ, 100 ದಿನ 100 ಬಹುಮಾನ ಕಾರ್ಯಕ್ರಮದ 7ನೇ ಹಂತದ ಬಂಪರ್ ಡ್ರಾ ಮೂಡುಬಿದಿರೆ ಪ್ರೆಸ್ಟೀಜ್ ಟವರ್‌ನಲ್ಲಿರುವ ಶಾಖೆಯಲ್ಲಿ ನಡೆಯಿತು.
ಉದ್ಯಮಿಗಳಾದ ರವೀಂದ್ರ ಪಿಳ್ಳೆ, ಶೇಖ್ ಅಶ್ರಫ್, ಮಂಜುನಾಥ ಮಲ್ಯ, ರವೀಂದ್ರ, ಆಲ್ವಿನ್ ಲೋಬೋ ವಾಮದಪದವು, ಪವಿತ್ರ ಶೆಟ್ಟಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಶೀನಾ ಮಾಸ್ತಿಕಟ್ಟೆ, ವಾಯ್ಸ ಆಫ್ ಆರಾಧನಾ ಪದ್ಮಶ್ರೀ ಭಟ್, ಅಭಿಷೇಕ್ ಶೆಟ್ಟಿ, ಪ್ರಾಧ್ಯಾಪಕ ಪಿ.ವಿ.ಭಟ್, ಸಮಾಜ ಸೇವಕ ಅನಿಲ್ ಮೆಂಡೋನ್ಸ ಮುಖ್ಯ ಅತಿಥಿಯಾಗಿದ್ದರು.
ಕಳೆದ ಡ್ರಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 7ನೇ ಹಂತದ ಬಂಪರ್ ಡ್ರಾ ಕಾರ್ಯಕ್ರಮ ನಡೆಯಿತು. ಅಗರಿ ಎಂಟರ್‌ಪ್ರೈಸಸ್ ಮಾಲೀಕ ಆಗರಿ ರಾಘವೇಂದ್ರ ರಾವ್ ಅತಿಥಿಗಳನ್ನು ಗೌರವಿಸಿದರು. ಮೂಡುಬಿದಿರೆ ಶಾಖೆ ಸಂಚಾಲಕ ಅಗರಿ ವಾದಿರಾಜ ರಾವ್, ಮ್ಯಾನೇಜರ್ ಸುನೀಲ್, ಸಿಬ್ಬಂದಿ, ಗ್ರಾಹಕರು ಉಪಸ್ಥಿತರಿದ್ದರು.