ಜಿಲ್ಲೆ

ಕಲೋತ್ಸವದಲ್ಲಿ ಅಗಲ್ಪಾಡಿ ಶಾಲೆ ಚಾಂಪಿಯನ್

ಬದಿಯಡ್ಕ: ಶೇಣಿ ಶಾರದಾಂಬಾ ಹೈಯರ್ ಸೆಂಡರಿ ಶಾಲೆಯಲ್ಲಿ ಜರುಗಿದ ಕುಂಬಳೆ ಉಪಜಿಲ್ಲಾಮಟ್ಟದ ಕಲೋತ್ಸವದಲ್ಲಿ ಅಗಲ್ಪಾಡಿ ಅನ್ನಪೂರ್ಣೇಶ್ವರಿ ಸಂಸ್ಥೆ ಉತ್ತಮ ಸಾಧನೆ ದಾಖಲಿಸಿತು. ಹೈಸ್ಕೂಲ್ ವಿಭಾಗದ ಸಂಸ್ಕೃತೋತ್ಸವದಲ್ಲಿ 85 ಅಂಕಗಳೊಂದಿಗೆ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ. ಹಿರಿಯ ಪ್ರಾಥಮಿಕ ಹಾಗೂ ಹೈಯರ್ ಸೆಕೆಂಡರಿ ವಿಭಾಗದ ಕನ್ನಡ ಕಲೋತ್ಸವದಲ್ಲಿಯೂ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.