ಲಕ್ಷ್ಮಣ ನಿಂಬರಗಿ 
ಜಿಲ್ಲೆ

ಹಬ್ಬಗಳ ಹಿನ್ನೆಲೆ, ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ, ಎಂಟು ರೌಡಿಗಳ ಗಡಿಪಾರು

ವಿಜಯಪುರ: ಸಾಲು ಸಾಲು ಹಬ್ಬಗಳು ಆಗಮಿಸುತ್ತಿರುವ ಬೆನ್ನಲ್ಲೇ ಮುಂಜಾಗೃತ ಕ್ರಮವಾಗಿ ಎಂಟು ರೌಡಿಗಳನ್ನು ಗಡಿಪಾರು ಮಾಡಿ ಬುಧವಾರ ಆದೇಶಿಸಲಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅಹಿತಕರ ಘಟನೆ ಜರುಗದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 1212 ರೌಡಿಗಳಿದ್ದು ಅದರಲ್ಲಿ ಪ್ರಮುಖ 27 ರೌಡಿಗಳನ್ನು ಆಯ್ದುಕೊಂಡು ಗಡಿಪಾರು ಆದೇಶ ಮಾಡಲು ಉಪ ವಿಭಾಗೀಯ ದಂಡಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆ ಪ್ರಕಾರ ವಿಚಾರಣೆ ನಡೆದು ವಿವಿಧ ಅಪರಾಧ ಪ್ರಕರಣದಲ್ಲಿ ಭಾಗಿಯಾದ 8 ರೌಡಿಗಳನ್ನು ವಿವಿಧ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಮಾಡಲಾಗಿದೆ. ಇನ್ನುಳಿದ 19 ಜನರ ಗಡಿಪಾರು ಆದೇಶಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಗಡಿಪಾರು ಆದವರ ವಿವರ

ಖತಿಜಾಪುರದ ರವಿ ಸಂಗಮೇಶ ಬಾಡಂಗಡಿ (26), ಬಸವನಬಾಗೇವಾಡಿಯ ಮಹಮ್ಮದ್ ಹನೀಫ್ ಮಹ್ಮದ್ ಯುಸೂಫ್ ಬಾಗವಾನ್(32), ಉಕ್ಕಲಿ ಗ್ರಾಮದ ರವಿ ಗಣಪತಿ ನಂದಿ (37), ವಿಜಯಪುರ ಎಂಜಿ ರಸ್ತೆಯ ನಿವಾಸಿ ಮಹಮ್ಮದ್ ಸಾಜೀದ ಅಬ್ದುಲ್ ಸತ್ತಾರ ಇನಾಮದಾರ(40), ಜಮೀರ್ ಊರ್ಫ್ ಜಮೀರ್‌ಅಹ್ಮದ್ ಅಬ್ದುಲ್ ರಜಾಕ ಮುಲ್ಲಾ (35), ಉಪ್ಪಲದಿನ್ನಿಯ ಹಣಮಂತಪ್ಪ ಯಲ್ಲಪ್ಪ ಹಳ್ಳಿ (43), ಮುದ್ದೇಬಿಹಾಳದ ಚೇತನ ಊರ್ಫ್ ಪವನ ಮಲ್ಲಿಕಾರ್ಜುನ ಜತ್ತಿ (26) ಹಾಗೂ ಯಮನಪ್ಪ ಊರ್ಫ್ ಪಾಂಡು ಕಾಮಣ್ಣ ಕಟ್ಟಿಮನಿ (ಕಟಬರ) (51) ಇವರನ್ನು ಗಡಿಪಾರು ಮಾಡಿ ಆದೇಶಿಸಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.