ಜಿಲ್ಲೆ

ಶಾಸಕ ಸುಕುಮಾರ್ ಶೆಟ್ಟಿ ವಿರುದ್ಧ ಫೇಸ್‌ಬುಕ್‌ನಲ್ಲಿ ಮಾನಹಾನಿಕರ ಕಮೆಂಟ್ ಮಾಡಿದವರ ವಿರುದ್ಧ ದೂರು

ಕುಂದಾಪುರ: ಶಾಸಕ ಸುಕುಮಾರ್ ಶೆಟ್ಟಿ ಅವರ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾನಹಾನಿಕರವಾಗಿ ಕಮೆಂಟ್ ಹಾಕಿದವರ ವಿರುದ್ಧ ಇಲ್ಲಿನ ಡಿವೈಎಸ್‌ಪಿ ಹಾಗೂ ಸೆನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಅಮರನಾಥ ಶ್ರೀಯಾನ್ ಎಂಬುವರ ಹೆಸರಿನಲ್ಲಿದ್ದ ಖಾತೆಯಲ್ಲಿ ಶಾಸಕರ ವಿರುದ್ಧ ಅವಹೇಳನಕಾರಿಯಾಗಿ ಬರೆಯಲಾಗಿತ್ತು. ಇದಕ್ಕೆ ಕಮೆಂಟ್ ಮಾಡಿದ ಸ್ವರ್ಣರಾಜ್ ಶೆಟ್ಟಿ, ಚಿಂತನ್ ದೇವಾಡಿಗ, ಕರುಣಾಕರ ಖಾರ್ವಿ ಎಂಬುವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.
ಪ್ರಸಾದ್ ಪೂಜಾರಿ ಎಂಬಾತ ಬೇರೆ ಬೇರೆ ಹೆಸರಿನಲ್ಲಿ ಪೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಮಾನಹಾನಿಕರ ಪೋಸ್ಟ್ ಮಾಡುತ್ತಿದ್ದ ಬಗ್ಗೆ ಶಾಸಕ ಸುಕುಮಾರ ಶೆಟ್ಟಿ ಮೇನಲ್ಲೂ ದೂರು ನೀಡಿದ್ದರು.