ಹುಬ್ಬಳ್ಳಿ: ಇಲ್ಲಿಯ ಪ್ರತಿಷ್ಠಿತ ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪಪೂ ವಿಜ್ಞಾನ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವಿನುತಾ ಹೊಸಮನಿ ಮರು ಮೌಲ್ಯಮಾಪನದ ಬಳಿಕ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದಿದ್ದಾರೆ.
ಫಲಿತಾಂಶ ಘೊಷಣೆಯಾದಾಗ 591 ಅಂಕಗಳನ್ನು ಪಡೆದಿದ್ದರು. ಮರು ಮೌಲ್ಯಮಾಪನದ ಬಳಿಕ 6 ಅಂಕಗಳು ಹೆಚ್ಚಿಗೆಯಾಗಿ 597 ಅಂಕಗಳನ್ನು ಗಳಿಸಿದ್ದಾರೆ. ಇದರಿಂದ ವಿಜ್ಞಾನ ವಿಭಾಗದಲ್ಲಿ ಧಾರವಾಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ ಚೌಗಲಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.