ಜಿಲ್ಲೆ

ತಿಂಗಳು ಕಳೆದರೂ ಸಿಕ್ಕಿಲ್ಲ ಪರಿಹಾರ; ತಾರಿಹಾಳ ಅಗ್ನಿ ದುರಂತ ಪ್ರಕರಣ

ಕೇಶವಮೂತಿ೯ ವಿ.ಬಿ. ಹುಬ್ಬಳ್ಳಿ
ಇಲ್ಲಿನ ಹೊರ ವಲಯ ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶದ ಐ.ಸಿ. ಫ್ಲೇಮ್​ ಕಾರ್ಖಾನೆಯಲ್ಲಿ ಜು.23ರಂದು ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಮೃತಪಟ್ಟ 6 ಕಾಮಿರ್ಕರ ಕುಟುಂಬದವರಿಗೆ ತಲಾ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದ ಸರ್ಕಾರ ತಿಂಗಳಾದರೂ ಪರಿಹಾರ ನೀಡುತ್ತಿಲ್ಲ.
ಅವಡ ಸಂಭವಿಸಿದ ಸಂದರ್ಭದಲ್ಲಿ 8 ಕಾಮಿರ್ಕರು ಗಂಭೀರವಾಗಿ ಗಾಯಗೊಂಡು ಕಿಮ್ಸ್​ಗೆ ದಾಖಲಾಗಿದ್ದರು. ಅಂದು ತಡರಾತ್ರಿ ಒಬ್ಬ ಮಹಿಳೆ, ಮರುದಿನ ಇಬ್ಬರು ಕಾಮಿರ್ಕರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು. ನಂತರ ಮೂವರು ಕಾಮಿರ್ಕರು ಸೇರಿ ಒಟ್ಟು ಆರು ಕಾಮಿರ್ಕರು ಮೃತಪಟ್ಟಿದ್ದಾರೆ. ಮರುದಿನ ಕಿಮ್ಸ್​ಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್​, ಶಾಸಕ ಅರವಿಂದ ಬೆಲ್ಲದ ಹಾಗೂ ಇತರ ಅಧಿಕಾರಿಗಳು, ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಆದರೆ, ಈವರೆಗೆ ಬಿಡಿಗಾಸೂ ಮೃತರ ಕುಟುಂಬದವರ ಕೈ ಸೇರಿಲ್ಲ.
ಮೃತರ ಮಕ್ಕಳ ಆರೈಕೆ ಮಾಡಲು ಬಾಲ ವಿಕಾಸ ಯೋಜನೆಯಡಿ ಮೂರು ವರ್ಷಗಳ ಕಾಲ ಅನುದಾನ ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದರು. ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಇನ್ನಾದರೂ ಮೃತ ಕಾಮಿರ್ಕರ ಬಡ ಕುಟುಂಬಗಳಿಗೆ ಸರ್ಕಾರ ಕೊಟ್ಟ ಭರವಸೆಯಂತೆ ನಡೆದುಕೊಳ್ಳಬೇಕು ಎಂಬುದು ಮೃತರ ಕುಟುಂಬದವರ ಅಳಲು.
ಮೃತಪಟ್ಟವರ ಹೆಸರು
ಗದಗ- ಬೆಟಗೇರಿ ಮೂಲದ ವಿಜಯಲಕ್ಷ್ಮಿಯಚ್ಚಲಗಾರ (34), ತಾರಿಹಾಳದ ಗೌರವ್ವ ಹಿರೇಮಠ (45), ಚನ್ನವ್ವ ಅರಿವಾಳ (42), ಕಲಟಗಿ ತಾಲೂಕು ಲಿಂಗನಕೊಪ್ಪದ ಮೌಳೇಶ ಹದ್ದನ್ನವರ (27), ಬಿಡ್ನಾಳ ಎಸ್​.ಎಂ.ಕೃಷ್ಣಾ ನಗರದ ಮಲ್ಲಿಕ್​ರೆಹಾನ್​ ಕೊಪ್ಪದ (18), ಭಂಡಿವಾಡದ ನಿರ್ಮಲಾ ಹುಚ್ಚಣ್ಣವರ (29) ಮೃತಪಟ್ಟ ಕಾಮಿರ್ಕರು.
ತಬಸುಮ್​ ನಾಪತ್ತೆ
ಐ.ಸಿ. ಫ್ಲೇಮ್​ ಫ್ಯಾಕ್ಟರಿಯ ಮಾಲೀಕ ಅಬ್ದುಲ್​ ಶೇಖ್​ ಹಾಗೂ ಮ್ಯಾನೇಜರ್​ ಮಂಜುನಾಥನನ್ನು ಈಗಾಗಲೇ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಫ್ಯಾಕ್ಟರಿಯಲ್ಲಿ ಅಬ್ದುಲ್​ ಜತೆ ಪಾಲುದಾರಿಕೆ ಹೊಂದಿದ್ದ ತಬಸುಮ್​ ಎಂಬ ಮಹಿಳೆ ನಾಪತ್ತೆಯಾಗಿದ್ದಾಳೆ.

ಅಗ್ನಿ ದುರಂತ ನಡೆದ ಮರುದಿನ ಕಿಮ್ಸ್​ಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳಿಯ ಶಾಸಕರು ಪರಿಹಾರ ನೀಡುವುದಾಗಿ ಭರವಸೆ ನೀಡಿ ಹೋಗಿದ್ದರು. ಅದಾದ ನಂತರ ಯಾರೊಬ್ಬರೂ ನಮ್ಮನ್ನು ಸಂಪರ್ಕ ಮಾಡಿಲ್ಲ. ಪರಿಹಾರವನ್ನೂ ನೀಡಿಲ್ಲ. > ವೀರಭದ್ರಪ್ಪ ಯಚ್ಚಲಗಾರ, ಮೃತ ವಿಜಯಲಕ್ಷ್ಮಿಪತಿತಾರಿಹಾಳ ಅಗ್ನಿ ಅವಡದಲ್ಲಿ ಗಾಯಗೊಂಡಿದ್ದ 8 ಕಾಮಿರ್ಕರನ್ನೂ ಬದುಕಿಸಿಕೊಳ್ಳಲು ಸಾಕಷ್ಟು ಶ್ರಮಪಟ್ಟರೂ 6 ಜನ ಮೃತಪಟ್ಟರು. ಇಬ್ಬರು ಚೇತರಿಸಿಕೊಂಡಿದ್ದಾರೆ. ಮೃತರ ಕುರಿತ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದ್ದು. ಎರಡು- ಮೂರು ದಿನಗಳಲ್ಲಿ ಪರಿಹಾರ ನೀಡಲಾಗುವುದು.> ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ