ಬೆಂಗಳೂರು: ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ನಮ್ಮ ಮೆಟ್ರೋ ರೈಲಿನ (Metro Train) ಪ್ರಯಾಣ ದರವೂ ಏರಿಕೆಯಾಗಿದೆ. ದರ ಏರಿಕೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು, ಭಾನುವಾರದಿಂದಲೇ (ಫೆ.9) ಟಿಕೆಟ್ ದರ ಶೇ.46 ಹೆಚ್ಚಳವಾಗಿದೆ.
ಸ್ಮಾರ್ಟ್ಕಾರ್ಡ್ಗಳ ಬಳಕೆದಾರರಿಗೆ ಶೇ.5 ರಿಯಾಯಿತಿ ನೀಡಿ, ತುಸು ಸಮಾಧಾನ ಕೊಟ್ಟಿದೆ. ಸದ್ಯದ ಏರಿಕೆ ಪ್ರಕಾರ, 0-2 ಕಿಮೀ ಪ್ರಯಾಣಕ್ಕೆ 10 ರೂ. ಮತ್ತು 25-30 ಕಿ.ಮೀ. ಪ್ರಯಾಣಕ್ಕೆ 90 ರೂ. ಆಗಲಿದೆ. ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಶನಿವಾರ ಅಧಿಕೃತ ಆದೇಶ ಹೊರಡಿಸಿದೆ.
ಮೆಟ್ರೋ (Metro) ಪ್ರಯಾಣ ದರ ಪರಿಷ್ಕರಣೆ ಸಂಬಂಧ 2024 ಸೆ.7ರಂದು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಸಮಿತಿ ರಚಿಸಿತ್ತು. ಪರಿಷ್ಕೃತ ದರದ ಶಿಫಾರಸು ವರದಿಯನ್ನು 2024ರ ಡಿಸೆಂಬರ್ 16ರಂದು ಸಮಿತಿ ಸಲ್ಲಿಸಲಾಗಿತ್ತು. ಇದಕ್ಕೆ ಬಿಎಂಆರ್ಸಿಎಲ್ ಆಡಳಿತ ಮಂಡಳಿ ಅನುಮೋದನೆ ನೀಡಿದ್ದು, ಭಾನುವಾರ ಬೆಳಗ್ಗೆ 7 ಗಂಟೆಯಿಂದಲೇ ಪರಿಷ್ಕೃತ ದರ ಜಾರಿಗೊಳಿಸಿದೆ.
ನಾನ್ ಪೀಕ್ ಅವರ್ನಲ್ಲೂ ರಿಯಾಯಿತಿ: ಈ ಮೊದಲು ಪೀಕ್ ಅವರ್ನಲ್ಲಿ ಮಾತ್ರ ಶೇ.5 ರಿಯಾಯಿತಿ ಇತ್ತು. ಇದೀಗ ನಾನ್ ಪೀಕ್ ಅವರ್ನಲ್ಲಿಯೂ ಶೇ.5 ರಿಯಾಯಿತಿ ನೀಡಲಾಗಿದೆ. ನಾನ್ಪೀಕ್ ಅವರ್ ಮತ್ತು ಪೀಕ್ ಅವರ್ ಸೇರಿ ಸ್ಮಾರ್ಟ್ ಕಾರ್ಡ್ಗಳ ಮೇಲೆ ಶೇ.10 ರಿಯಾಯಿತಿ ನೀಡಲಾಗಿದೆ.
ಆಫ್-ಪೀಕ್ ಸಮಯ: ವಾರದ ದಿನಗಳಲ್ಲಿ ಬೆಳಗ್ಗೆ ಕಾರ್ಯಾಚರಣೆ ಆರಂಭದಿಂದ 8 ಗಂಟೆಯವರೆಗೆ, ಮಧ್ಯಾಹ್ನ 12ರಿಂದ 4 ಗಂಟೆವರೆಗೆ ಮತ್ತು ರಾತ್ರಿ 9 ಗಂಟೆಯಿಂದ ಕಾರ್ಯಾಚರಣೆ ಮುಕ್ತಾಯದವರೆಗೆ. ಎಲ್ಲ ಭಾನುವಾರ ಮತ್ತು ರಾಷ್ಟ್ರೀಯ ರಜಾ ದಿನಗಳಲ್ಲಿ (ಜ. 26, ಆಗಸ್ಟ್ 15, ಅ. 2) ದಿನವಿಡೀ ಏಕರೂಪವಾಗಿ ಸ್ಮಾರ್ಟ್ ಕಾರ್ಡ್ಗಳ ಮೇಲೆ ಶೇ.10 ರಿಯಾಯಿತಿ ಘೋಷಿಸಲಾಗಿದೆ.
ಕನಿಷ್ಠ 90 ರೂ.
- ಸ್ಮಾರ್ಟ್ಕಾರ್ಡ್ನ ಮೇಲೆ ಶೇ.5 ರಿಯಾಯಿತಿ ಮುಂದುವರಿಕೆ ಆಗಿದೆ. ಮೊದಲು ಸ್ಮಾರ್ಟ್
- ಕಾರ್ಡ್ನಲ್ಲಿ 50 ರೂ. ಕನಿಷ್ಠ (ಮಿನಿಮಮ್ ಹಣ ಇರಬೇಕಿತ್ತು. ಈಗ
- ಕನಿಷ್ಠ 90 ರೂ. ಇರಲೇಬೇಕು ಎಂದು ಘೋಷಿಸುವ ಮೂಲಕ ಕನಿಷ್ಠ ಮೊತ್ತ 40 ರೂ. ಹೆಚ್ಚಳ ಮಾಡಲಾಗಿದೆ.
- 0-2 ಕಿಮೀ ಪ್ರಯಾಣಕ್ಕೆ -₹10
- 2-4 ಕಿಲೋಮೀಟರ್ಗೆ -₹20
- 4-6 ಕಿಲೋಮೀಟರ್ಗೆ -₹30
- 6-8 ಕಿಲೋಮೀಟರ್ಗೆ -₹40
- 8-10 ಕಿಲೋಮೀಟರ್ಗೆ -₹50
- 10-15 ಕಿಲೋಮೀಟರ್ಗೆ -₹60
- 15-20 ಕಿಲೋಮೀಟರ್ಗೆ -₹70
- 20-25 ಕಿಲೋಮೀಟರ್ಗೆ -₹80
- 25-30 ಕಿಲೋಮೀಟರ್ಗೆ -₹90
- 30 ಕಿಮೀಗಿಂತ ಹೆಚ್ಚಿನದಕ್ಕೆ -₹90
- ಚಲ್ಲಘಟ್ಟದಿಂದ ವೈಟ್ಫೀಲ್ಡ್ಗೆ ಟೋಕನ್-60 ರೂ, ಸ್ಮಾರ್ಟ್ ಕಾರ್ಡ್-57 ರೂ.
- ಮಾದಾವರದಿಂದ ರೇಷ್ಮೆ ಸಂಸ್ಥೆವರೆಗೆ ಟೋಕನ್-60 ರೂ., ಸ್ಮಾರ್ಟ್ ಕಾರ್ಡ್-57 ರೂ.
- ಚಲ್ಲಘಟ್ಟದಿಂದ ಕೆಂಗೇರಿಗೆ ಟೋಕನ್-10 ರೂ., ಸ್ಮಾರ್ಟ್ ಕಾರ್ಡ್-9.5 ರೂ.
- ಚಲ್ಲಘಟ್ಟದಿಂದ ಕೆಂಗೇರಿ ಬಸ್ ಟರ್ವಿುನಲ್ ಟೋಕನ್-15 ರೂ., ಸ್ಮಾರ್ಟ್ಕಾರ್ಡ್-14.25 ರೂ.
- ಚಲ್ಲಘಟ್ಟದಿಂದ ಪಟ್ಟಣಗೆರೆ ಟೋಕನ್-15 ರೂ., ಸ್ಮಾರ್ಟ್ ಕಾರ್ಡ್-14.25 ರೂ.
- ಚಲ್ಲಘಟ್ಟದಿಂದ ಜ್ಞಾನಭಾರತಿ ಟೋಕನ್-18 ರೂ., ಸ್ಮಾರ್ಟ್ ಕಾರ್ಡ್-17.1 ರೂ.
- ಚಲ್ಲಘಟ್ಟದಿಂದ ರಾಜರಾಜೇಶ್ವರಿನಗರ ಟೋಕನ್-20 ರೂ., ಸ್ಮಾರ್ಟ್ ಕಾರ್ಡ್-19 ರೂ.
- ಚಲ್ಲಘಟ್ಟದಿಂದ ನಾಯಂಡಹಳ್ಳಿ ಟೋಕನ್-22 ರೂ., ಸ್ಮಾರ್ಟ್ ಕಾರ್ಡ್-20.9 ರೂ.
- ಚಲ್ಲಘಟ್ಟದಿಂದ ಮೈಸೂರು ರಸ್ತೆ ಟೋಕನ್-25 ರೂ., ಸ್ಮಾರ್ಟ್ ಕಾರ್ಡ್-23.75 ರೂ.
- ಚಲ್ಲಘಟ್ಟದಿಂದ ದೀಪಾಂಜಲಿನಗರ ಟೋಕನ್-28 ರೂ., ಸ್ಮಾರ್ಟ್ ಕಾರ್ಡ್-26.6 ರೂ.
- ಚಲ್ಲಘಟ್ಟದಿಂದ ಅತ್ತಿಗುಪ್ಪೆ ಟೋಕನ್-30 ರೂ., ಸ್ಮಾರ್ಟ್ ಕಾರ್ಡ್-28.5 ರೂ.
- ಚಲ್ಲಘಟ್ಟದಿಂದ ವಿಜಯನಗರ ಟೋಕನ್-30 ರೂ., ಸ್ಮಾರ್ಟ್ ಕಾರ್ಡ್-28.5 ರೂ.
- ಚಲ್ಲಘಟ್ಟದಿಂದ ಹೊಸಹಳ್ಳಿ ಟೋಕನ್-35 ರೂ., ಸ್ಮಾರ್ಟ್ ಕಾರ್ಡ್-33.25 ರೂ.
- ಚಲ್ಲಘಟ್ಟದಿಂದ ಮಾಗಡಿರಸ್ತೆ ಟೋಕನ್-35 ರೂ., ಸ್ಮಾರ್ಟ್ ಕಾರ್ಡ್-33.25 ರೂ.
- ಚಲ್ಲಘಟ್ಟದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಟೋಕನ್-38 ರೂ., ಸ್ಮಾರ್ಟ್ ಕಾರ್ಡ್-36.1 ರೂ.
- ಚಲ್ಲಘಟ್ಟದಿಂದ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ಟೋಕನ್-40 ರೂ., ಸ್ಮಾರ್ಟ್ ಕಾರ್ಡ್-38 ರೂ.