filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 31; 
ಜಿಲ್ಲೆ

ಕಲಾವಿದರಿಂದ ಗಣೇಶೋತ್ಸವ ಮೆರುಗು

ಯರಗಟ್ಟಿ: ಕರ್ಕಶ ಶಬ್ದ ಮಾಡುವ ಡಿಜೆಗಳ ಬಳಕೆ ಕೈಬಿಟ್ಟು ಜಾನಪದ, ಸಾಂಸತಿಕ ಕಲಾ ತಂಡಗಳ ಕಲಾವಿದರಿಂದ ಗಣೇಶೋತ್ಸವ ಮಾಡಿದರೆ ಹಬ್ಬಕ್ಕೆ ಮೆರುಗು ಬರುತ್ತದೆ ಎಂದು ಸಿಪಿಐ ವೀರೇಶ ಮಠಪತಿ ಹೇಳಿದರು.

ಇಲ್ಲಿನ ಮಹಾಂತ ದುರದುಂಡೀಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಸೊಗಡಿನನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಮಾಡಿದರೆ ಎಲ್ಲರೂ ನೋಡಿ ಸಂಭ್ರಮಿಸುತ್ತಾರೆ. ಅಲ್ಲದೆ ಕಲಾವಿದರು ಹಾಗೂ ಕಲಾತಂಡಕ್ಕೂ ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.

ಮುಖಂಡ ಭಾಸ್ಕರ ಹಿರೇಮೆತ್ರಿ ಮಾತನಾಡಿ, ಗಜಾನನ ಉತ್ಸವ ಕಮಿಟಿಗಳು ಪೊಲೀಸ್​ ಅಧಿಕಾರಿಗಳ ಮಾರ್ಗದರ್ಶನದಂತೆ ಶಾಂತಿ ಹಾಗೂ ಸಂಭ್ರಮದಿಂದ ಹಬ್ಬ ಆಚರಿಸಬೇಕು ಎಂದರು. ಹೆಸ್ಕಾಂ ಅಧಿಕಾರಿ ಮಹಾಂತೇಶ ಯರಗಟ್ಟಿ, ಪಪಂ ಸದಸ್ಯ ನಿಖಿಲ ಪಾಟೀಲ, ವಿಠ್ಠಲ ದೇವರಡ್ಡಿ, ಇಮಾಮ್​ಸಾಹೇಬ್​ ಹುಸೇನಾಯ್ಕರ, ಸದಾನಂದ ಹಣಬರ, ಶಿವಾನಂದ ಪಟ್ಟಣಶೆಟ್ಟಿ, ವೀರಯ್ಯ ಮಠಪತಿ, ಮಹಾಂತೇಶ ಜಕಾತಿ, ರಾಜೇಂದ್ರ ವಾಲಿ, ಡಿ.ಕೆ. ರಫೀಕ್​, ರಮೇಶ ಪಾಟೀಲ ಹಾಗೂ ಗಜಾನನ ಉತ್ಸವ ಕಮಿಟಿ ಸದಸ್ಯರು, ಅಧಿಕಾರಿಗಳು ಇತರರು ಇದ್ದರು.