ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಫೆ.10ರಿಂದ 14ರವರೆಗೆ ನಡೆಯಲಿರುವ 15ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ನೀಲಿನಕ್ಷೆಯನ್ನು ರಕ್ಷಣಾ ಇಲಾಖೆಯು ಬಿಡುಗಡೆ ಮಾಡಿದೆ.
ಪ್ರದರ್ಶನಕ್ಕೆ ಆಗಮಿಸುವ ವೀಕ್ಷಕರು, ಮಾಧ್ಯಮ, ವಿಶೇಷ ಪ್ರತಿನಿಧಿಗಳು, ವಿದೇಶಿ ಗಣ್ಯರು ಸೇರಿ ಪ್ರತಿಯೊಬ್ಬರಿಗೂ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಾಹಿತಿಯನ್ನು ತನ್ನ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದೆ.
ಪಾರ್ಕಿಂಗ್ ಏರಿಯಾ, ಫೆಲೈಯಿಂಗ್, ರೆಸ್ಟೋರೆಂಟ್, ಸೆಮಿನಾರ್, ಪ್ರದರ್ಶನ ಸಭಾಂಗಣ, ಎಂಟ್ರಿ ಎಕ್ಸಿಟ್ ಸೇರಿ ಇಡೀ ವೈಮಾನಿಕ ಪ್ರದರ್ಶನವು ಎಲ್ಲೆಲ್ಲಿ ನಡೆಯಲಿದೆ ಎಂಬ ಚಿತ್ರಣವನ್ನು ನೀಡಿದೆ.
ಗೇಟ್ ನಂ.1ರಲ್ಲಿ ಅಗತ್ಯ ಸೇವೆಗಳ ಪೂರೈಕೆದಾರರಿಗೆ ಪ್ರವೇಶ ಕಲ್ಪಿಸಲಾಗಿದೆ. ಗೇಟ್-2ಎ ರಲ್ಲಿ ವಿಶೇಷ ಗಣ್ಯರಿಗೆ ಪ್ರವೇಶ, ಗೇಟ್ 2ಬಿ ಯಲ್ಲಿ ವಿವಿಧ ಸಂಸ್ಥೆಗಳು/ವಿದೇಶಿ ಪ್ರತಿನಿಧಿಗಳು, ವಾಯುನೆಲೆ ಸಿಬ್ಬಂದಿ, ಮಾಧ್ಯಮ ಮತ್ತು ಸೇವಾ ಅಧಿಕಾರಿಗಳಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಗೇಟ್ ನ3ರಲ್ಲಿ ಮಾಧ್ಯಮ, ವಿಶೇಷ ಪ್ರತಿನಿಧಿಗಳು ಮತ್ತು ವಾಯುನೆಲೆ ಸಿಬ್ಬಂದಿಗೆ ನಿರ್ಗಮನವಾಗಿರುತ್ತದೆ. ಗೇಟ್ ನಂ.4ರಲ್ಲಿ ತುರ್ತು ನಿರ್ಗಮನವಾಗಿದೆ.
ನಗರದಿಂದ ವಿಮಾನ ನಿಲ್ದಾಣದ ಕಡೆ ಸಾಗುವ ಮಾರ್ಗದ ಬಲಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಗೇಟ್ ನಂ.8ರಿಂದ 11ರವರೆಗೆ ವಾಣಿಜ್ಯ ವಾಹನಗಳ ಪ್ರವೇಶ ಮತ್ತು ನಿರ್ಗಮನವಿರಲಿದೆ.
ಇನ್ನುಳಿದಂತೆ 10 ಪ್ರದರ್ಶನ ಸಭಾಂಗಣ (ಎಕ್ಸಿಬಿಷನ್ ಹಾಲ್), ಇಂಡಿಯನ್ ಪೆವಿಲಿಯನ್, ಐಡೆಕ್ಸ್ ಪೆವಿಲಿಯನ್, ಕಾನ್ಫೆರೆನ್ಸ್ ಸೆಂಟರ್, ಸೆಮಿನಾರ್ ಹಾಲ್, ವಿಐಪಿ ಲಾಂಜ್, ಬಿ2ಬಿ, ರೆಸ್ಟೋರೆಂಟ್, ುಡ್ ಕೋರ್ಟ್, ವೈದ್ಯಕೀಯ ಕೇಂದ್ರ, ಕಂಟ್ರೋಲ್ ರೂಂ, ಉದ್ಘಾಟನಾ ಪ್ರದೇಶ, ರನ್‌ವೇ, ಡಿಸ್‌ಪ್ಲೇ ಏರಿಯಾ ಹೀಗೆ ಇಡೀ ವೈಮಾನಿಕ ಪ್ರದರ್ಶನವು ಎಲ್ಲೆಲ್ಲಿ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದೆ.