ಜಿಲ್ಲೆ

ಏರೋ ಇಂಡಿಯಾ: ಕನ್ನಡದಲ್ಲಿಯೇ ಸಿಗಲಿದೆ ಮಾಹಿತಿ

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಫೆ.10ರಿಂದ 14ರವರೆಗೆ ನಡೆಯಲಿರುವ 15ನೇ ವೈಮಾನಿಕ ಪ್ರದರ್ಶನದ ಮಾಹಿತಿಗಳು ಈ ಬಾರಿ ಇಂಗ್ಲಿಷ್ ಜತೆಗೆ ಕನ್ನಡ ಸೇರಿ ದೇಶದ 22 ಭಾಷೆಗಳಲ್ಲಿಯೂ ಲಭ್ಯವಾಗಲಿವೆ.

ವೈಮಾನಿಕ ಪ್ರದರ್ಶನದ ಹಾರಾಟಗಳು, ಹಾಲ್‌ಗಳು, ಸುದ್ದಿಗೋಷ್ಠಿಗಳು, ಪ್ರದರ್ಶನಕ್ಕೆ ವಿಧಿಸುವ ಶುಲ್ಕ, ನೋಂದಣಿ ಸೇರಿ ಸಂಪೂರ್ಣ ಮಾಹಿತಿಗಳು ಕನ್ನಡದಲ್ಲಿ ಲಭ್ಯವಾಗಲಿವೆ.

ರಕ್ಷಣಾ ಇಲಾಖೆ ಜತೆಗೆ ಭಾಷಿಣಿ ಎಂಬ ಸಂಸ್ಥೆಯ ಸಹಯೋಗದಲ್ಲಿ ಮೊಬೈಲ್ ಆೃಪ್ ಸಿದ್ಧಪಡಿಸಲಾಗಿದೆ. 2025ರ ವೈಮಾನಿಕ ಪ್ರದರ್ಶನವು ‘ದಿ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್’ ಎಂಬ ಹೆಸರಿನಲ್ಲಿ ಪ್ರದರ್ಶನವು ನಡೆಯಲಿದೆ.

ಪ್ರದರ್ಶನಕ್ಕೆ ಕೇವಲ 18 ದಿನಗಳು ಬಾಕಿ ಉಳಿದಿವೆ. ಇಲ್ಲಿಯವರೆಗೂ 809 ಪ್ರದರ್ಶಕರು, ಹೂಡಿಕೆದಾರರು, ನವೋದ್ಯಮಗಳು ಮತ್ತು ಎಂಎಸ್‌ಎಂಇಗಳು ನೋಂದಣಿ ಮಾಡಿಕೊಂಡಿವೆ. 53 ಏರ್‌ಕ್ರ್‌ಟಾಗಳು ಪ್ರದರ್ಶನ ನೀಡಲು ಸಿದ್ಧವಾಗಿವೆ. 7 ಲಕ್ಷಕ್ಕೂ ಅಧಿಕ ಸಂಖ್ಯೆಯ ವೀಕ್ಷಕರು ಭೇಟಿ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ರಕ್ಷಣಾ ಸಚಿವರ ಸಮಾವೇಶದಲ್ಲಿ 27 ದೇಶಗಳು ಭಾಗವಹಿಸಲಿವೆ. 250ಕ್ಕೂ ಹೆಚ್ಚಿನ ಎಂಒಯುಗಳು ಅಂತಿಮವಾಗಿವೆ. 75 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ವಹಿವಾಟು ನಡೆಯಬಹುದು ಎಂದು ಅಂದಾಜಿಸಲಾಗಿದೆ.

ಇನ್ನೋವೇಷನ್ಸ್ ಾರ್ ಡಿೆನ್ಸ್ ಎಕ್ಸಲೆನ್ಸ್ ಯೋಜನೆಯಲ್ಲಿ 200 ಕೋಟಿ ರೂ. ವಹಿವಾಟು ಈಗಾಗಲೇ ನಿಗದಿಯಾಗಿದೆ.