ವಿಜಯವಾಣಿ ಸುದ್ದಿಜಾಲ ಗುರುಪುರ
ಇಂಥ ಧಾರ್ಮಿಕ ಕಾರ್ಯಕ್ರಮ ಮೂಲಕ ಜಿಲ್ಲೆಯ ದೇವಸ್ಥಾನಗಳಲ್ಲಿ ಭಕ್ತಿ, ಶ್ರದ್ಧೆ ಮತ್ತು ದೇವರ ಅನುಷ್ಠಾನಗೊಳ್ಳುತ್ತಿದೆ. ಹಿಂದು ದೇವಸ್ಥಾನಗಳು ಹೇಗಿರಬೇಕು ಎಂಬುದಕ್ಕೆ ದಕ್ಷಿಣದ ದೇವಾಲಯಗಳು ಮಾದರಿಯಾಗಿವೆ ಎಂದು ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಶ್ರೀ ಕ್ಷೇತ್ರ ಅದ್ಯಪಾಡಿಯಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ದೇವಸ್ಥಾನದ ಸಭಾಂಗಣದಲ್ಲಿ ವಿವಿಧ ಸಮಿತಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಜಿತ್ ಆಳ್ವ ಬೈಲು ಏತಮೊಗರುಗುತ್ತು ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಸುಕೇಶ್ ಮಾಣೈ ತಲಕಳ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಕಂದಾವರ ಮತ್ತು ಸಮಿತಿ ಉಪಾಧ್ಯಕ್ಷ ವಸಂತ ಕೆ. ನಿರೂಪಿಸಿದರು.
ದೇವಾಲಯ ರಕ್ಷಕ ಮನೆತನದ ಪ್ರಮುಖರಾದ ರಮಾನಾಥ ಅತ್ತಾರ್(ಚಿತ್ತಣ್ಣ), ಅಶ್ವಿನಿ ಬಲ್ಲಾಳ್ ಬೈಲುಬೀಡು, ರಂಗನಾಥ ಹೆಗ್ಡೆ, ಬಾಲಕೃಷ್ಣ ರೈ ಕೊಳಂಬೆಗುತ್ತು, ದೇವಸ್ಥಾನ ಪ್ರಧಾನ ಅರ್ಚಕ ಸದಾಶಿವ ಭಟ್, ವಿವಿಧ ಸಮಿತಿಗಳ ಪದಾಧಿಕಾರಿ ಮತ್ತು ಸದಸ್ಯರು, ಬೈಲುಮಾಗಣೆಯ ಗ್ರಾಮಸ್ಥರು, ಸುಜಿತ್ ಶೆಟ್ಟಿ, ಹರೀಶ್ ಶೆಟ್ಟಿ ದೊಡ್ಡಮನೆ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ.ಭರತ್ ಶೆಟ್ಟಿ ಪಾಲ್ಗೊಂಡಿದ್ದರು.
ಧ್ವನಿಸುರಳಿ ಬಿಡುಗಡೆ, ಸನ್ಮಾನ
ಅದ್ಯಪಾಡಿಯ ಪ್ರಣತಿ ರಾವ್ ಹಾಡಿರುವ, ಗುರುರಾಜ್ ಎಂ.ಬಿ. ಸಾಹಿತ್ಯ ರಚಿಸಿ ಸಂಗೀತ ನೀಡಿರುವ ‘ಆದಿನಾಥ ಸನ್ನಿಧಿ’ ಧ್ವನಿಸುರಳಿ ಬಿಡುಗಡೆಗೊಳಿಸಲಾಯಿತು. ಗಾಯಕಿ ಪ್ರಣತಿ ರಾವ್ ಅವರನ್ನು ಗೌರವಿಸಲಾಯಿತು. ಜೀರ್ಣೋದ್ಧಾರ ಸಮಿತಿ ಸಂಘಟನಾ ಕಾರ್ಯದರ್ಶಿ ಭುಜಂಗ ಕುಲಾಲ್ ಅದ್ಯಪಾಡಿ ಮುಂದಾಳತ್ವದಲ್ಲಿ ಆದಿನಾಥೇಶ್ವರ ಧ್ವಜ ಆರೋಹಣ ಮಾಡಿ, ಸಭಿಕರಿಗೆ ಧ್ವಜ ವಿತರಿಸಲಾಯಿತು.
ಈ ಬಾರಿ ನನ್ನ ಕ್ಷೇತ್ರ ವ್ಯಾಪ್ತಿಯ ಹಲವು ಕ್ಷೇತ್ರಗಳಲ್ಲಿ ಬ್ರಹ್ಮಕಲಶ ನಡೆಯುತ್ತಿದೆ. ಈ ಮೂಲಕ ಧರ್ಮ- ಸಂಸ್ಕಾರ ಜಾಗೃತಗೊಳ್ಳುತ್ತಿವೆ. ದೇವರು ನನ್ನಿಂದ ಧಾರ್ಮಿಕ ಕೆಲಸ ಮಾಡಿಸುತ್ತಿದ್ದಾನೆ. ಎಲ್ಲರೂ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿದರೆ ಸಾಕು. ಉಳಿದೆಲ್ಲವೂ ದೇವರ ಇಚ್ಛೆಯಂತೆ ನಡೆಯುತ್ತದೆ. ಡಾ.ಭರತ್ ಶೆಟ್ಟಿ, ಶಾಸಕರು https://www.vijayavani.net/inauguration-of-sc-st-community-hall https://www.vijayavani.net/alwas-college-program