ಹುಕ್ಕೇರಿ ಕೋರ್ಟ್​ ಆವರಣದ ವಕೀಲರ ಸಂದ ಸಭಾಭವನದಲ್ಲಿ ಸಂದ ಅಧ್ಯರಾಗಿ ಆಯ್ಕೆಯಾದ ಕೆ.ಬಿ.ಕುರಬೇಟ ಅವರನ್ನು ಸನ್ಮಾನಿಸಲಾಯಿತು. ಬಿ.ಎಂ.ಜಿನರಾಳಿ, ಎಸ್​.ಜಿ.ನದ್​ಾ, ವಿಠ್ಠಲ ಗಸ್ತಿ ಇತರರಿದ್ದರು. ಹುಕ್ಕೇರಿ: ವಕೀಲರು ಮತ್ತು ನ್ಯಾಯಾಧೀಶರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ವಕೀಲರು ಉತ್ತಮವಾಗಿ ವಾದ ಮಂಡಿಸಿದರೆ, ನ್ಯಾಯಾಧೀಶರು ಒಳ್ಳೆಯ ತೀರ್ಪು ನೀಡಲು ಸಾಧ್ಯ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ ಕೆ.ಎಸ್​.ರೊಟ್ಟೇರ ಹೇಳಿದರು. 
ಜಿಲ್ಲೆ

ಸಮನ್ವಯದಿಂದ ಕಾರ್ಯನಿರ್ವಹಿಸಿ

ಸೋಮಲಿಂಗ ತಳವಾರ

ಹುಕ್ಕೇರಿ: ವಕೀಲರು ಮತ್ತು ನ್ಯಾಯಾಧೀಶರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ವಕೀಲರು ಉತ್ತಮವಾಗಿ ವಾದ ಮಂಡಿಸಿದರೆ, ನ್ಯಾಯಾಧೀಶರು ಒಳ್ಳೆಯ ತೀರ್ಪು ನೀಡಲು ಸಾಧ್ಯ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ ಕೆ.ಎಸ್​.ರೊಟ್ಟೇರ ಹೇಳಿದರು.

ಸಮೀಪದ ಕೋರ್ಟ್​ ಆವರಣದ ವಕೀಲರ ಸಂದ ಸಭಾಭವನದಲ್ಲಿ ಸೋಮವಾರ ಎರಡನೇ ಬಾರಿ ಸಂದ ಅಧ್ಯರಾಗಿ ಆಯ್ಕೆಯಾದ ಕೆ.ಬಿ.ಕುರಬೇಟ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು. ವಕೀಲರ ವೃತ್ತಿಯಲ್ಲಿರುವ ಸ್ವಾತಂತ್ರ$್ಯ ಬೇರೆ ಯಾವ ವೃತ್ತಿಯಲ್ಲಿಲ್ಲ. ಆದ್ದರಿಂದ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮಾ.8ರಂದು ಜರುಗಲಿರುವ ಲೋಕ ಅದಾಲತ್​ನಲ್ಲಿ ವಕೀಲರು ಸಾಧ್ಯವಾದಷ್ಟು ಕದಾರರ ಪ್ರಕರಣ ಇತ್ಯರ್ಥಪಡಿಸಬೇಕು ಎಂದರು.

ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಬಿ.ಕುರಬೇಟ, ರಾಜ್ಯ ವಕೀಲರ ಪರಿಷತ್​ ಉಪಾಧ್ಯ ವಿನಯ ಮಾಂಗಳೇಕರ ಮತ್ತು ಸದಸ್ಯ ಕೆ.ಬಿ.ನಾಯಿಕ, ಹಿರಿಯ ವಕೀಲ ರಾಮಚಂದ್ರ ಜೋಶಿ, ಅವಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿದರು. ಉಪಾಧ್ಯ ಬಿ.ಎಂ.ಜಿನರಾಳಿ, ಕಾರ್ಯದರ್ಶಿ ಎಸ್​.ಜಿ.ನದ್​ಾ, ಜಂಟಿ ಕಾರ್ಯದರ್ಶಿ ವಿಠ್ಠಲ ಗಸ್ತಿ, ಖಜಾಂಚಿ ಅಂಬರೀಶ ಬಾಗೇವಾಡಿ, ಮಹಿಳಾ ಪ್ರತಿನಿಧಿ ಅನಿತಾ ಕುಲಕರ್ಣಿ, ವಕೀಲರಾದ ಎ.ಎಸ್​.ಹುಲ್ಲೋಳಿ, ಪ್ರಕಾಶ ಪಾಟೀಲ, ಪಿ.ಆರ್​.ಚೌಗಲಾ, ಎ.ಎಂ.ಹ್ಯಾಟಗೋಳ, ಬಿ.ಕೆ.ಮಗೆನ್ನವರ, ಬಿ.ಆರ್​.ಚಂದರಗಿ, ಸಿ.ಎಂ.ಸಂಸುದ್ದಿ, ಡಿ.ಕೆ.ಅವರಗೋಳ, ಆಶಾ ಸಿಂಗಾಡಿ, ಆರ್​.ಬಿ.ಪಾಟೀಲ, ಹರೀಶ ದೊಡಲಿಂಗನವರ ಇತರರಿದ್ದರು. ವಕೀಲ ಎಚ್​.ಎಲ್​.ಪಾಟೀಲ ಸ್ವಾಗತಿಸಿದರು. ಶಿವಲಿಂಗ ತೇಲಿ ನಿರೂಪಿಸಿದರು. ಆರ್​.ಬಿ.ಮೋಶಿ ವಂದಿಸಿದರು.