ಜಿಲ್ಲೆ

25 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದ ಕಳ್ಳನ ಬಂಧನ

ಗೋಪಾಲಕೃಷ್ಣ ಪಾದೂರ್

ಉಡುಪಿ: ನಗರದ ಮೂಡನಿಡಂಬೂರು ಗ್ರಾಮದ ಕೋರ್ಟ್ ಹಿಂಬದಿ ರಸ್ತೆಯಲ್ಲಿ ವಕೀಲೆ ವಕೀಲ ರಾವ್ ಅವರ ಮನೆಯಲ್ಲಿ ಜು.19ರಂದು 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಕಳ್ಳನನ್ನು ಪೋಲಿಸರು ವಾರದೊಳಗೆ ಬಂಧಿಸಿದ್ದಾರೆ. ನ್ಯಾಯಾಲಯಾಧೀಶರ ಮುಂದೆ ಅರೋಪಿಯನ್ನು ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯ ಮುತ್ತಪ್ಪ ಬಸಪ್ಪ, ಮಾವರಾಣಿ ( 27) ಬಂಧಿತ ಅರೋಪಿ. ಪೊಲೀಸರು ಬಾಗಲಕೋಟೆ ಜಿಲ್ಲೆಯ ನೀಲನಗರದ ಸಿದ್ಧೇಶ್ವರ ಕ್ರಾಸ್ ಬಳಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 38,500 ನಗದು ವಶಪಡಿಸಿಕೊಂಡಿದ್ದಾರೆ.