ಜಿಲ್ಲೆ

ಶಿಸ್ತು, ಸಂಯಮ ರೂಢಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ

ಮರಿದೇವ ಹೂಗಾರ

ಹುಬ್ಬಳ್ಳಿ: ನಗರದ ಕೆಎಲ್ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಎನ್‌ಎಸ್‌ಎಸ್ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು.
ಅತಿಥಿಗಳಾಗಿ ಆಗಮಿಸಿದ್ದ ಪ್ರೊ.ವಿ.ಎಸ್. ಕಟ್ಟಿಮಠ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಮಯ, ಮಾನಸಿಕ ಸ್ಥಿರತೆ ಮತ್ತು ವ್ಯಕ್ತಿತ್ವದ ಸರ್ವತೋಮುಖ ಪ್ರಗತಿ ಸಾಧಿಸಬೇಕು. ನಿಗದಿತ ಗುರಿ ತಲುಪಲು ನಿರಂತರ ಶ್ರಮ ಅಗತ್ಯ ಎಂದರು.
ಪ್ರಾಚಾರ್ಯ ಪ್ರೊ.ಎಸ್.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಳೆಯ ಎನ್‌ಎಸ್‌ಎಸ್ ಸ್ವಯಂ ಸೇವಕರು ಕೊಡಮಾಡುವ ’ಅನುನಿಧಿ’ ಪುರಸ್ಕಾರವನ್ನು ವಿಕಾಸ ಪಾಟೀಲ, ಕಾವ್ಯ ಭರಮಗೌಡ್ರ, ಸಂಗೀತಾ ಕಂಬಾಳಿಮಠ ಮುಡಿಗೇರಿಸಿಕೊಂಡರು.
ವಂದನಾ ಪವಾರ, ರೋಹಿತ ಕಲಾಲ ಅವರಿಗೆ ಪ್ರಶಂಸನಾ ಪುರಸ್ಕಾರ ನೀಡಲಾಯಿತು .
ಎನ್‌ಎಸ್‌ಎಸ್ ಲೀಡರ್, ಮೆಂಟರ್‌ಗಳಿಗೆ ಅಭಿನಂದನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಅನುನಿಧಿ ಸದಸ್ಯರಿಗೆ ಸನ್ಮಾನಿಸಲಾಯಿತು.
ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ. ಬಸವರಾಜ ಹುಬ್ಬಳ್ಳಿ ಸ್ವಾಗತಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ.ನೇತ್ರಾವತಿ ಗಬ್ಬೂರ ವಾರ್ಷಿಕ ವರದಿ ಓದಿದರು. ಪ್ರೊ. ಸೋಮಶೇಖರ ಇತರರಿದ್ದರು.