ಆಲಮೇಲ ಪಟ್ಟಣದ ಬಜಾರ್ ದೇವಿ ಮಂದಿರದಲ್ಲಿ ದುರ್ಗಾಷ್ಟಮಿ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತಾ ಯೋಗೇಶ್ವರಿ ಮಾತನಾಡಿದರು. ಪ್ರಜಾಪಿತ ಬ್ರಹ್ಮಾಕುಮಾರಿ ರೇಣುಕಾ ಅಕ್ಕ, ಜಿಪಂ ಮಾಜಿ ಸದಸ್ಯೆ ಶಂಕ್ರೆಮ್ಮ ಹೂಗಾರ ಇತರರಿದ್ದರು. 
ಜಿಲ್ಲೆ

ಹಿಂದು ಸಂಸ್ಕಾರ ತಿಳಿಯಲು ಸಲಹೆ

Vijayapura

ಆಲಮೇಲ: ಮಹಿಳೆಯರು ಹೋರಾಟ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಸಂತ ಮಹಾಮಂಡಳಿ ಮಾರ್ಗದರ್ಶಿ ಮಾತಾ ಯೋಗೇಶ್ವರಿ ಹೇಳಿದರು.

ಪಟ್ಟಣದ ಬಜಾರ್ ದೇವಿ ಮಂದಿರದಲ್ಲಿ ದುರ್ಗಾಷ್ಟಮಿ ನಿಮಿತ್ತ ಗುರುವಾರ ತಾಲೂಕು ವಿಶ್ವ ಹಿಂದು ಪರಿಷತ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವ ಹಿಂದು ಪರಿಷತ್ ಒಂದು ಧಾರ್ಮಿಕ ಸಂಘಟನೆಯಾಗಿದ್ದು, ಮಠ, ಮಂದಿರಗಳನ್ನು ರಕ್ಷಣೆ ಮಾಡುವುದೇ ಪರಿಷತ್‌ನ ಮುಖ್ಯ ಉದ್ದೇಶವಾಗಿದೆ. ಇಂದು ದೇಶದ ಸಂಸ್ಕೃತಿ ಹಾಗೂ ಸಂಸ್ಕಾರ ಉಳಿಯಬೇಕಾದರೆ ಜನರಿಗೆ ಹಿಂದು ಸಂಸ್ಕಾರ ಮತ್ತು ವಿಚಾರಗಳನ್ನು ತಿಳಿಸಬೇಕು ಎಂದರು.

ಪ್ರಜಾಪಿತ ಬ್ರಹ್ಮಾಕುಮಾರಿ ರೇಣುಕಾ ಅಕ್ಕ ಮಾತನಾಡಿದರು. ಜಿಪಂ ಮಾಜಿ ಸದಸ್ಯೆ ಶಂಕ್ರೆಮ್ಮ ಹೂಗಾರ, ಮಂಗಲಾ ಗುಡ್ಡಿಮಠ, ವರದಾ ಉಪ್ಪಿನ, ಮೋನಮ್ಮ ಬಡಿಗೇರ, ಕಾವ್ಯಾ ಅಕ್ಕಲಕೋಟ, ವಿಜಯಲಕ್ಷ್ಮೀ ಬಂದೆ, ವಿಜಯಲಕ್ಷ್ಮೀ ಅಕ್ಕಲಕೋಟ, ಶ್ರೀಮಂತ ದುದ್ದಗಿ, ರಾಜೇಂದ್ರ ರಾಠೋಡ ಇತರರಿದ್ದರು.