ಹುಬ್ಬಳ್ಳಿ: ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಪ್ರೊ. ಸಿದ್ದಲಿಂಗಪ್ಪ ಸಿ. ಕಡಕೋಳ ಸಲಹೆ ನೀಡಿದರು.
ಇಲ್ಲಿಯ ವಿದ್ಯಾನಗರದ ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜ್‌ನ ಬಿಸಿಎ ವಿಭಾಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತಾಂತ್ರಿಕ ಉತ್ಸವದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ನಮ್ಮ ಕಾಲೇಜ್‌ನಲ್ಲಿದೆ. ಕಲಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಎರಡು ದಿನಗಳವರೆಗೆ ನಡೆದ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.
ಕೋಡ್ ಮೆಕ್ಯಾನಿಕ್ ಮೆನ್‌ಡೋರಾ ತಂಡವು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು.
ಹ್ಯಾಕಥಾನ್‌ನಲ್ಲಿ ಸುಮಿತ ಪೂಜಾರಿ, ವಿಕಾಸ ಅಂಗಡಿ, ಶಾಲಿನಿ, ಅಕ್ಷಯ (ಪ್ರಥಮ), ಗೌತಮ ಗೊಳೆ, ಪ್ರತೀಕ ಎಂ., ಪ್ರೇಮ ಚಾಲಸಿ, ವರುಣ ಸೂರ್ಯವಂಶಿ (ದ್ವಿತೀಯ), ಕೋಡಿಂಗ್‌ನಲ್ಲಿ ದರ್ಶನ ಮೆಹರವಾಡೆ, ರೋಹಿತ ಬಸಾಪುರ (ಪ್ರಥಮ), ನಿಖಿಲ ಉಗರಗೋಳ, ದಿಶಾ ಆರ್. (ದ್ವಿತೀಯ), ಡಿಸೈನಿಂಗ್‌ನಲ್ಲಿ ಕಾರ್ತಿಕ ಬಿ., ನೇತ್ರಾವತಿ ಕೆ. (ಪ್ರಥಮ), ಹರ್ಷಿದ ಪಿ., ಲಕ್ಷ್ಮೀ ಬಿ. (ದ್ವಿತೀಯ), ಗೇಮಿಂಗ್‌ನಲ್ಲಿ ಶ್ರೀವತ್ಸ, ಜೋಶನಾ ಎಂ. (ಪ್ರಥಮ), ನಿತೀಶ ಸಿ., ಭರತ ಎನ್. (ದ್ವಿತೀಯ), ಕಮ್ಯುನಿಕೇಷನ್‌ನಲ್ಲಿ ಸೂಕ್ತಿ, ಸಂಜನಾ ಉಪೇರ (ಪ್ರಥಮ), ಐಶ್ವರ್ಯಾ, ಅಮನ (ದ್ವಿತೀಯ), ಬೆಸ್ಟ್ ಮ್ಯಾನೇಜರ್‌ನಲ್ಲಿ ಪ್ರಿಯಾ ಬಿ.ಕೆ., (ಪ್ರಥಮ), ಅನುಜ ಸವಣೂರ (ದ್ವಿತೀಯ) ಬಹುಮಾನ ಪಡೆದರು.
ಸಂಯೋಜಕ ಪ್ರೊ. ದೀಪಕ ಸವದತ್ತಿ, ಪ್ರೊ. ಕಾವ್ಯಾ ಕುಲಕರ್ಣಿ, ಪ್ರೊ. ಸುರಕ್ಷಾ ಎಂ.ಬಿ., ಪ್ರೊ. ನಿಖಿತಾ ಪಾಟೀಲ, ಆದಿತ್ಯಾ ಕೊನ್ನೂರ, ಸ್ಫೂರ್ತಿ ಕೆ., ಮೈತ್ರಿ ಇತರರು ಇದ್ದರು.