ಹುಬ್ಬಳ್ಳಿ: ಇಲ್ಲಿನ ಭೈರಿದೇವರಕೊಪ್ಪದ ಗ್ಲೋಬಲ್ ಬಿಜಿನೆಸ್ ಕಾಲೇಜ್ನಲ್ಲಿ ಇತ್ತೀಚೆಗೆ ರಾಷ್ಟ್ರಮಟ್ಟದ ಎಚ್ಆರ್ ಫೆಸ್ಟ್ ಪ್ರಯಾಸ್ ಮುಕ್ತಾಯ ಸಮಾರಂಭ ಏರ್ಪಡಿಸಲಾಗಿತ್ತು.
ಕಾಲೇಜ್ ನಿರ್ದೇಶಕ ಡಾ. ಪ್ರಸಾದ ರೂಡಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ರೂಢಿಸಿಕೊಳ್ಳಬೇಕು. ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಸೋತರೆ ಮತ್ತೊಂದು ಯಶಸ್ಸಿಗೆ ಮೆಟ್ಟಿಲಾಗಲಿದೆ. ಧೈರ್ಯಗುಂದದೇ ಸ್ಪೂರ್ತಿ ತೆಗೆದುಕೊಳ್ಳಬೇಕು ಎಂದರು.
ಡಾ. ಹರ್ಷಲ್ ಬೋರಗಾಂವ್ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಹೊರಗೆ ಹಾಕಲು ಜಿಬಿಎಸ್ ಕಾಲೇಜ್ ಸತತವಾಗಿ ಶ್ರಮಿಸುತ್ತಿದೆ ಎಂದರು. ರಾಜ್ಯಾದ್ಯಂತ 24 ಕಾಲೇಜ್ ಟೀಮ್ಳು ಸೇರಿ ಒಟ್ಟು 160 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಡಾ. ತೇಜಸ್ವಿನಿ ಪಾಟೀಲ ಇತರರು ಇದ್ದರು. ಗ್ಲಾನ್ಸಿ ಹಾಗೂ ಅನುಷಾ ನಿರೂಪಿಸಿದರು.