ಹುಬ್ಬಳ್ಳಿ: ಜೆಎಸ್ ಗ್ಲೋಬಲ್ ಫೌಂಡೇಷನ್ (ಎನ್‌ಜಿಒ) ವತಿಯಿಂದ ಇಲ್ಲಿಯ ಗೋಕುಲ ರಸ್ತೆಯ ನೆಹರು ನಗರದ ಎಚ್‌ಡಿಎಂಸಿ ಉದ್ಯಾನದಲ್ಲಿ ಶುಕ್ರವಾರ ವೃಕ್ಷಾರೋಪಣಾ ಅಭಿಯಾನ ಏರ್ಪಡಿಸಲಾಗಿತ್ತು.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಸಸಿ ನೆಟ್ಟು ಪೋಷಿಸಬೇಕು. ಮುಂದಿನ ಜನಾಂಗವನ್ನು ಉಳಿಸಬೇಕು. ಈ ನಿಟ್ಟಿನಲ್ಲಿ ಫೌಂಡೇಷನ್ ಸಂಸ್ಥಾಪಕ ಪ್ರೊ.ಜಿಶಾನ್ ಸಿರ್ಸಂಗಿ 10 ಲಕ್ಷ ಸಸಿ ನೆಡುವ ಸಂಕಲ್ಪ ತೊಟ್ಟಿದ್ದಾರೆ. ಈಗಾಗಲೇ 513 ಸಸಿ ನೆಟ್ಟಿದ್ದಾರೆ. ಈ ಗುರಿ 30 ಲಕ್ಷದವರೆಗೆ ಹೆಚ್ಚಿಸಬೇಕು ಎಂದರು.
ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ನಿವೃತ್ತ ಡಿಜಿಪಿ ಶಂಕರ ಬಿದರಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಫೌಂಡೇಷನ್ ಸಂಸ್ಥಾಪಕ ಪ್ರೊ.ಜಿಶಾನ್ ಸಿರ್ಸಂಗಿ, ಶರಣಪ್ಪ ಕೊಟಗಿ, ಅಂದಪ್ಪ ಸಂಕನೂರ, ಮೋಹನ ಹೊಸಮನಿ ಇತರರು ಇದ್ದರು.