ಜಿಲ್ಲೆ

ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಲಹೆ

ಮರಿದೇವ ಹೂಗಾರ

ಹುಬ್ಬಳ್ಳಿ: ನಗರದ ಎನ್‌ಎಲ್ಇ ಸೊಸೈಟಿಯ ಡಾ.ಜಿ.ವಿ. ಜೋಶಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 2025-26ನೇ ಸಾಲಿನ ಇಂಟ್ರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭವು ಇತ್ತೀಚೆಗೆ ಏರ್ಪಾಟಾಗಿತ್ತು.

ಪದಗ್ರಹಣ ಸಮಾರಂಭದ ನೇತೃತ್ವ ವಹಿಸಿದ್ದ ಶಿವರಾಮ್ ಹೆಗ್ಡೆ ಅವರು, ಶಾಲಾ-ಕಾಲೇಜ್‌ನಲ್ಲಿಯೇ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎನ್‌ಎಲ್‌ಇ ಸಂಸ್ಥೆಯ ಕಾರ್ಯದರ್ಶಿ ರಾಜಾ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.

ಕಳೆದ ವರ್ಷ ಇಂಟ್ರಾಕ್ಟ್ ಕ್ಲಬ್ ಪ್ರತಿನಿಧಿ ಅನನ್ಯ ಬಿರಾದರ ಪಾಟೀಲ್, ಪೂರನ ಖಿಚ್ಚಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಇಂಟ್ರಾಕ್ಟ ಕ್ಲಬ್ ಉಪಾಧ್ಯಕ್ಷ ಹೇಮಲ್ ಶಾಹ, ಕಾರ್ಯದರ್ಶಿ ರಿಷಿ ತಿವಾರಿ, ಯುವ ಸೇವಾ ನಿರ್ದೇಶಕ ಪ್ರಶಾಂತ ಹೆಬಸೂರು, ವಿನೋದ ಪಾಟೀಲ, ಮನೋಹರ ಕಮ್ಮಾರ, ಮಹದೇವ ಹರಕುಣಿ ಇತರರು ಇದ್ದರು.

ಮುಖ್ಯೋಪಾಧ್ಯಾಯ ವಿಶಾಲ ಬಿನ್ನಾಳ ಸ್ವಾಗತಿಸಿದರು. ರಾಘಸುಧಾ ವಿ. ಮತ್ತು ಯಾಸಿಕಾ ಕೆ . ನಿರೂಪಿಸಿದರು. ಜೈನಾ ಶೇಖ್ ವಂದಿಸಿದರು.