ಕೋಲಾರದ ಹಳೇ ಬಸ್​ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಬದಿ ಸಸಿ ನೆಡುವ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯೆ ಲಕ್ಷಿ$್ಮದೇವಮ್ಮ ಚಾಲನೆ ನೀಡಿದರು. ಕೆ.ವಿ.ಶಂಕರಪ್ಪ, ಡಾ.ರವಿಂದ್​, ವಿ.ಬಾಬು, ಉಮೇಶ್​ ಇದ್ದರು. 
ಜಿಲ್ಲೆ

ಪರಿಸರ ನಾಶದಿಂದ ವ್ಯತಿರಿಕ್ತ ಪರಿಣಾಮ

ಕೋಲಾರ ಡೆಸ್ಕ್

ಕೋಲಾರ : ಪರಿಸರ ನಾಶದಿಂದ ಉಂಟಾಗುತ್ತಿರುವ ಪರಿಣಾಮದಿಂದ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ಆ ಮೂಲಕ ಅರಣ್ಯೀಕರಣಕ್ಕೆ ಒತ್ತು ನೀಡಬೇಕು ಎಂದು ನಗರಸಭೆ ಅಧ್ಯೆ ಲಕ್ಷ್ಮೀದೇವಮ್ಮ ಹೇಳಿದರು.

ನಗರದ ಹಳೇ ಬಸ್​ ನಿಲ್ದಾಣ ಆವರಣದಲ್ಲಿ ವಂಶೋದಯ ಆಸ್ವತ್ರೆ, ಕೋಲಾರ ನಗರಸಭೆ, ಸಾಮಾಜಿಕ ಅರಣ್ಯ ಇಲಾಖೆ ಮತ್ತು ಜಿಲ್ಲಾ ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆ ಹಾಗೂ ರೋಟರಿ ಕೋಲಾರ ನಂದಿನಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭೂಮಿ ಕಲುಷಿತವಾಗಲು ಮಾನವನೇ ಕಾರಣ, ಈ ಮಾಲಿನ್ಯ ನಿಯಂತ್ರಣ ಮಾಡಲು ಪ್ರತಿಯೊಬ್ಬರೂ ಸಂಘ-ಸಂಸ್ಥೆಗಳೊಂದಿಗೆ ಕೈ ಜೋಡಿಸಬೇಕು. ನಮ್ಮ ಕೋಲಾರ, ನಮ್ಮ ನಗರ ಘೋಷವಾಖ್ಯದೊಂದಿಗೆ ಸೌಂದರ್ಯ ಕಾಪಾಡಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಸಂಘ-ಸಂಸ್ಥೆಗಳು ಇತ್ತೀಚೆಗೆ ಪರಿಸರ ರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿವೆ. ಇದರ ಲಾಭವನ್ನು ಸಾರ್ವಜನಿಕರು ಪಡೆಯಬೇಕು, ಕೋಲಾರ ನಗರವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕಿದೆ ಎಂದು ತಿಳಿಸಿದರು.

ಅರಣ್ಯ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲು ಮಾತನಾಡಿ, ವಿದ್ಯಾರ್ಥಿಗಳು ಮತ್ತು ನಗರ ವಾಸಿಗಳು ತಮ್ಮಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಗಿಡಗಳನ್ನು ನೆಟ್ಟು ಪೋಷಿಸುವ ಹವ್ಯಾಸ ರೂಡಿಸಿಕೊಳ್ಳಬೇಕು. ಪರಿಸರ ಅಭಿವೃದ್ಧಿಗೆ ಸಹಕರಿಸಬೇಕು, ಮನೆಗಳ ಸಮೀಪ ಗಿಡಗಳನ್ನು ನೆಟ್ಟು ಪೋಷಿಸಿ ಅರಣ್ಯೀಕರಣಕ್ಕೆ ಸಹಕರಿಸಬೇಕು ಎಂದು ಹೇಳಿದರು.

ನಗರದಲ್ಲಿ ಕೆಲವೇ ಮರಗಳು ಇವೆ, ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ವಾಹನಗಳು ಹೊರಸೂಸುವ ಗಾಳಿ ಸ್ವೀಕರಿಸುವ ಮರಗಳ ಸಂಖ್ಯೆ ಹೆಚ್ಚಾದರೆ ನಗರದಲ್ಲಿ ಉತ್ತಮ ಗಾಳಿ ಹಾಗೂ ಧೂಳುಮುಕ್ತ ನಗರವಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಮಾತನಾಡಿ, ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆ ಮತ್ತು ರೋಟರಿ ಸಂಸ್ಥೆಗಳ ಮೂಲ ಆಶಯ ತಮ್ಮ ಸಮೀಪದ ಸಾರ್ವಜನಿಕರಿಗೆ ಬೇಕಾದ ಮೂಲ ಅಗತ್ಯಗಳು ಸಿಗುವಲ್ಲಿ ತಮ್ಮ ಕೈಲಾದಷ್ಟು ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.

ನೀರಾವರಿ ಹೋರಾಟಗಾರ ರಾಜೇಶ್​, ವಂಶೋದಯ ಆಸ್ವತ್ರೆಯ ಯೋಜನೆಯ ಸಂಚಾಲಕಿ ಪವಿತ್ರಾ, ಸ್ಕೌಟ್ಸ್​ ಗೈಡ್ಸ್​ ಸಂಸ್ಥೆಯ ಜಿಲ್ಲಾ ಸಂಟನಾ ಆಯುಕ್ತ ವಿ.ಬಾಬು, ಜಿಲ್ಲಾ ಖಜಾಂಚಿ ಉಮೆಶ್​, ಅರಣ್ಯ ಇಲಾಖೆಯ ಮನೋಹರ್​ ಚರಣ್​, ಆರೋಗ್ಯ ನಿರೀಕ್ಷಕ ನವಾಜ್​ ಅಹ್ಮದ್​ ಹಾಜರಿದ್ದರು.

ಭೂತಾಯಿಯ ಋಣ ತೀರಿಸಿ: ಭೂಮಿ ತಾಯಿಯ ಋಣ ತೀರಿಸಲು ಅತ್ಯಂತ ಉತ್ತಮವಾದ ಮಾರ್ಗ ಗಿಡಗಳನ್ನು ನೆಟ್ಟು ಪೋಷಿಸುವುದು. ಗಿಡ ಮರಗಳು ಬೆಳೆದು ಮನುಷ್ಯನಿಗೆ ಆಹಾರ, ಗಾಳಿ, ನೀರು ಕಲ್ಪಿಸುವುದರ ಜತೆಗೆ, ಉತ್ತಮ ವಾತಾವರಣ ನೀಡುತ್ತದೆ. ವಿದ್ಯಾರ್ಥಿಗಳು ತಮ್ಮ ಕೈಲಾದಷ್ಟು ಗಿಡ&ಮರಗಳನ್ನು ಬೆಳೆಸುವ ಮೂಲಕ ಸಮಾಜದ ಮತ್ತು ಭೂಮಿಯ ಋಣ ತೀರಿಸಬೇಕು ಎಂದು ಮಕ್ಕಳ ತಜ್ಞ ಡಾ.ಅರವಿಂದ್​ ಹೇಳಿದರು.