ಜಿಲ್ಲೆ

ಮುಂದುವರಿದ ಮನೆ ಮನೆ ಸಮೀಕ್ಷೆ ಕಾರ್ಯ

Mysuru

ಮೈಸೂರು: ಕರೊನಾ ಅಬ್ಬರ ಹೆಚ್ಚಾಗಿದ್ದರಿಂದ ಲಾಕ್‌ಡೌನ್ ಅಗಿರುವ ನರಸಿಂಹರಾಜ (ಎನ್.ಆರ್.) ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರವೂ ಮನೆ, ಮನೆ ಸಮೀಕ್ಷೆ ಕಾರ್ಯ ಮುಂದುವರಿಯಿತು.

ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇದ್ದುದ್ದರಿಂದ ಕ್ಷೇತ್ರದಲ್ಲಿ ಬರುವ ಬಡಾವಣೆಗಳನ್ನು ಲಾಕ್‌ಡೌನ್ ಮಾಡಿ, ಮನೆ, ಮನೆ ಸಮೀಕ್ಷೆ ಕಾರ್ಯ ಆರಂಭಿಸಲಾಗಿತ್ತು. ಮನೆಗಳಿಗೆ ತೆರಳಿ ಎಲ್ಲರನ್ನು ಪ್ರಥಮ ಹಂತದ ಪರೀಕ್ಷೆಗೆ ಒಳಪಡಿಸಲಾಯಿತು. ಸೋಂಕಿನ ಲಕ್ಷಣ ಕಂಡುಬಂದವರನ್ನು ಹೆಚ್ಚಿನ ಚಿಕಿತ್ಸೆಗೆ ಕೋವಿಡ್ ಆಸ್ಪತ್ರೆಗೆ ದಾಖಲಿಸಿದರೆ, ಕೆಲವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸಲಹೆ ನೀಡಲಾಯಿತು.