ಅರಕೇರಾ: ಎನ್‌ಆರ್‌ಬಿಸಿ ಅರಕೇರಾ ಬ್ರಾಂಚ್ -9ಎ ಅನ್ವರ ಗ್ರಾಮದ ಬಳಿ ಕುಸಿದಿರುವ ಕಾಲುವೆ ಮಣ್ಣು ತೆರವುಗೊಳಿಸುವ ದುರಸ್ಥಿ ಕಾರ್ಯ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಸುಮಾರು 3.5 ಕಿ.ಮೀ. ಕಾಲುವೆ ಮಣ್ಣು ಕುಸಿದಿದ್ದು, ಅಲ್ಲದೇ ಸಮರ್ಪಕ ನಿರ್ವಹಣೆ ಕೊರತೆಯಿಂದ ಹೊಂಡು ಸೇರಿಕೊಂಡಿದೆ. ನಾಲೆಗೆ ನೀರು ಹರಿಸಿದರೂ ಮುಂದೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಐದು ಹಿಟಾಚಿ ಮೂಲಕ ತೆರವುಗೊಳಿಸಲಾಗುತ್ತಿದೆ. ಶೇ.60 ಮಣ್ಣು ಮತ್ತು ಹೂಳು ತೆರವುಗೊಳಿಸುವ ಕಾಮಗಾರಿ ಪೂರ್ಣಗೊಂಡಿದೆ. 2-3 ದಿನಗಳಲ್ಲಿ ಕಾಮಗಾರಿ ಮುಗಿಸುವ ಬಗ್ಗೆ ಎನ್‌ಆರ್‌ಬಿಸಿ ಚಿಕ್ಕಹೊನ್ನಕುಣಿ ವಿಭಾಗದ ಎಇಇ ಈರಣ್ಣ ಭರವಸೆ ನೀಡಿದ್ದಾರೆ. ಆನಂತರ ನೀರು ಹರಿಸಿದರೆ ರೈತರ ಬೆಳೆಗಳಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ.
ಮಂಗಳವಾರ, ಬುಧವಾರ ತಾಲೂಕಿನಾದ್ಯಂತ ಸುರಿದ ಮಳೆಯಿಂದ ಬೆಳೆಗಳಿಗೆ ಅಲ್ಪಮಟ್ಟಿಗೆ ಅನುಕೂಲವಾಗಿದೆ. ಬೇಸಿಗೆಯಲ್ಲಿ ಕಾಮಗಾರಿ ಕೈಗೆತ್ತುಕೊಡಿದ್ದರೆ ರೈತರ ಬೆಳೆಗಳು ಉಳಿಯುತ್ತಿದ್ದವು. ಎನ್‌ಆರ್‌ಬಿಸಿ ಅಧಿಕಾರಿಗಳು ಮುಂಜಾಗೃತಿ ಕ್ರಮ ವಹಿಸಿದ್ದರೆ ಈ ಸಮಸ್ಯೆ ಉದ್ಭವವಾಗುತ್ತಿದ್ದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.