ಆನೇಕಲ್: ಬೆಂಗಳೂರಿನ ಡಾಫೋಡಿಲ್ ಆಂಗ್ಲ ಶಾಲೆಯ ವಿದ್ಯಾರ್ಥಿಗಳು ಬದುಕಿ ಮತ್ತು ಬದುಕಲು ಬಿಡಿ ಯೋಜನೆಯಡಿ ನಿಧಿ ಸಂಗ್ರಹಣೆ ಮಾಡಿ ಒಟ್ಟು 3,15,000 ರೂ.ಗಳ ದೇಣಿಗೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ವಿವಿಧ ಪ್ರಾಣಿಗಳ ದತ್ತು ಸ್ವೀಕಾರಕ್ಕಾಗಿ ನೀಡಲಾಯಿತು.
ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಪಾಲಕರು ಒಗ್ಗೂಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವಿವಿಧ ಜಾತಿಯ ಅಳಿವಿನಂಚಿನ ಪ್ರಾಣಿಗಳಾದ ಹಿಮಾಲಯದ ಕಪ್ಪು ಕರಡಿ, ಗರಿಯಲ್ ಅನ್ನು ಎರಡು ವರ್ಷ ಅವಧಿಗೆ ಮತ್ತು ಭಾರತೀಯ ಮುಳ್ಳುಹಂದಿಯನ್ನು ಒಂದು ವರ್ಷ ಅವಧಿಗೆ ದತ್ತು ಸ್ವೀಕರಿಸಿದರು. ಉದ್ಯಾನವನದ ಪಶುವೈದ್ಯಾಧಿಕಾರಿ ಡಾ.ಆನಂದ್ ಅವರಿಗೆ ಸಂಗ್ರಹಿಸಿದ ಮೊತ್ತವನ್ನು ಹಸ್ತಾಂತರಿಸಿದರು.