ದತ್ತು ಪಡೆದ ಪೋಷಕರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗು ಹಸ್ತಾಂತರಿಸಿದರು. ಮಹಾಂತೇಶ ಭಜಂತ್ರಿ, ರವೀಂದ್ರ ರತ್ನಾಕರ್, ಆರ್.ಆರ್.ನಾಡಗೌಡರ, ಸಚಿನ ಹಿರೇಮಠ ಇತರರಿದ್ದರು. 
ಜಿಲ್ಲೆ

ದತ್ತು ಮಗು ಹಸ್ತಾಂತರಿಸಿದ ಸಚಿವೆ ಲಕ್ಷ್ಮೀ

ಬೆಳಗಾವಿ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿ ನಗರದ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರದ ಅಭಿರಕ್ಷಣೆಯಲ್ಲಿದ್ದ ಮಗುವನ್ನು ಸಿಎಆರ್‌ಎ ನಿಯಮಗಳಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ದತ್ತು ಪಡೆದ ಪೋಷಕರಿಗೆ ಹಸ್ತಾಂತರಿಸಿದರು.

ಕೇರಳ ರಾಜ್ಯದ ದತ್ತು ಪೋಷಕರು ಮೂರುವರೆ ತಿಂಗಳ ಗಂಡು ಮಗುವನ್ನು ಸಚಿವರಿಂದ ಸ್ವೀಕರಿಸಿದರು. ಮಗುವನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವಂತೆ ಸಚಿವೆ ವಿನಂತಿಸಿದರು. ನಿಯಮಾವಳಿಯಂತೆ ಕಾನೂನು ಪ್ರಕ್ರಿಯೆ ಪೂರೈಸಿ ಮಗು ಹಸ್ತಾಂತರಿಸಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ, ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ವಿಶೇಷಾಧಿಕಾರಿ ರವೀಂದ್ರ ರತ್ನಾಕರ್, ಆರ್.ಆರ್. ನಾಡಗೌಡರ, ಸಚಿನ ಹಿರೇಮಠ ಇತರರಿದ್ದರು.