ಎಂ.ಬಿ.ಅಯ್ಯನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಚನ ದಿನ ಕಾರ್ಯಕ್ರಮವನ್ನು ಎನ್.ಎಂ.ರವಿಕುಮಾರ್ ಉದ್ಘಾಟಿಸಿದರು. ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸಾ.ಮ.ಸಂಗಮೇಶ್ವರಯ್ಯ, ಪ್ರಭಾರ ಮುಖ್ಯಶಿಕ್ಷಕ ವಿ.ಈರಣ್ಣ, ಕಾರ್ಯದರ್ಶಿ ಕೆ.ಎಸ್.ವೀರೇಶ, ಸಹ ಕಾರ್ಯದರ್ಶಿ ಒ.ಎಂ.ಮಂಜುನಾಥ ಇತರರಿದ್ದರು. 
ಜಿಲ್ಲೆ

ಶರಣರ ವಚನಗಳನ್ನು ಅಳವಡಿಸಿಕೊಳ್ಳಿ

Gangavati - Desk - Veeresh S Ullagaddi

ಕಾನಹೊಸಹಳ್ಳಿ: ಶರಣರ ವಚನಗಳನ್ನು ಅರ್ಥೈಯಿಸಿಕೊಂಡು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ.ರವಿಕುಮಾರ್ ಹೇಳಿದರು.


ಎಂ.ಬಿ.ಅಯ್ಯನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಗುರುವಾರ ಆಯೋಜಿಸಿದ್ದ ವಚನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಚನಗಳು ಇಲ್ಲದೆ ನಾವಿಲ್ಲ. ಹೀಗಾಗಿ ವಚನಗಳನ್ನು ಗ್ರಹಿಸುವ ಮೂಲಕ ಅವುಗಳನ್ನು ಪಾಲಿಸಬೇಕು ಎಂದರು.

ಪತ್ರಕರ್ತ ಹುಡೇಂ ಕೃಷ್ಣಮೂರ್ತಿ ಮಾತನಾಡಿ, ಸಮ ಸಮಾಜದ ನಿರ್ಮಾಣಕ್ಕೆ ವಚನಗಳ ಮೂಲಕ ಕ್ರಾಂತಿ ಮಾಡಿದವರು ಶರಣರು. ಸಮಾಜಕ್ಕೆ ಅವರ ಕೊಡುಗೆ ಅಪಾರ ಎಂದರು. ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಚ್.ಕೆ.ಅರುಣ್ ಕುಮಾರ್ ಇತರರಿದ್ದರು.