ಕುಂದಗೋಳ: ಸ್ವಾತಂತ್ರ್ಯೋರಾಟದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಬ್ರಿಟಿಷರ ವಿರುದ್ಧ ಎದೆಯೊಡ್ಡಿ ಹೋರಾಡಿದ ಮಹಾನ್ ವ್ಯಕ್ತಿಯಾಗಿದ್ದು, ಅವರ ದೇಶಪ್ರೇಮವನ್ನು ಈಗಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಕಲ್ಯಾಣಪುರದ ಬಸವಣ್ಣಜ್ಜನವರು ಹೇಳಿದರು.
ಪಟ್ಟಣದ ಶಿವಾಜಿನಗರ ಕಿಲ್ಲಾ ಓಣಿಯಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಯುವಸೇನಾ (ರಿ) ಗ್ರೂಪ್ ವತಿಯಿಂದ ಭಗತ್ ಸಿಂಗ್ ಜಯಂತಿ ನಿಮಿತ್ತ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಗತ್ಸಿಂಗ್ ಬಾಲ್ಯದಿಂದಲೇ ದಿಟ್ಟ ಹೋರಾಟಗಾರರಾಗಿದ್ದರು. ಪ್ರತಿಯೊಬ್ಬರೂ ಅವರ ಜೀವನ ಚರಿತ್ರೆಯನ್ನು ಓದಬೇಕು ಎಂದರು.
ಗೌಡಪ್ಪಗೌಡ ಪಾಟೀಲ ಮಾತನಾಡಿ, ಪ್ರತಿಯೊಬ್ಬ ಯುವಕರು ದೇಶಪ್ರೇಮಿ ಭಗತ್ ಸಿಂಗ್ ಅವರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕ್ರಾಂತಿಕಾರಿ ಭಗತಸಿಂಗ್ ಯುವಸೇನಾ ಗ್ರೂಪ್ ಹಾಗೂ ಲೀಡ್ ಬ್ಯಾಂಕ್ ಧಾರವಾಡ ಸಂಯುಕ್ತ ಆಶ್ರಯದಲ್ಲಿ ಮಣ್ಣು ಸಂಗ್ರಹ ಕಾರ್ಯಕ್ಕೆ ಕಲ್ಯಾಣಪುರ ಮಠದ ಬಸವಣ್ಣಜ್ಜನವರು, ಶಿವಾನಂದ ಮಠದ ಶ್ರೀ ಮಹಾಂತ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ವಿಭಜಕಗಳಲ್ಲಿ ಸಸಿ ನಡಲಾಯಿತು. ಪಟ್ಟಣದ ತಾಲೂಕಾಸ್ಪತ್ರೆಯಲ್ಲಿ ರೋಗಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.
ಭಗತ್ ಸಿಂಗ್ ಗ್ರೂಪ್ ಅಧ್ಯಕ್ಷ ವಿಕಾಸ ಕಿರೇಸೂರ, ಉಪಾಧ್ಯಕ್ಷ ಆಕಾಶ ಚೌಹಾನ್, ಸದಸ್ಯರಾದ ಭರತ ಕಟಗಿ, ಪ್ರವೀಣ ಕಿರೇಸೂರ, ಹರೀಶ ಕೊನೇರಿ, ನಾಗು ಕುಂಕೂರ, ಶೇಖು ಹೈಬತ್ತಿ, ತಯ್ಯುಬ್ ಮಕಾಂದಾರ್, ಆನಂದ ಕಟಗಿ, ಪ್ರಶಾಂತ ಪಲ್ಲೇದ, ಅರುಣ ಹೊಸಮನಿ, ಶಿವಾನಂದ ಕುಡುವಕಲ, ದಾದಾಪೀರ್ ಟಪಾಲ್, ಇತರರಿದ್ದರು.