ಬೆಟ್ಟದಪುರದ ಮುರುಗಮಠದ ಮೋಕ್ಷಪತಿ ಸ್ವಾಮೀಜಿಯವರು 40 ದಿನಗಳ ಬೇಸಿಗೆ ಶಿಬಿರ ಉದ್ಘಾಟಿಸಿದರು. ಶಾಲಾ ಶಿಕ್ಷಕಿ ಪ್ರಿಯಾ, ಪ್ರಜ್ಞ್ಞಾ, ನಿವೇದಿತಾ, ಜೂರ, ಲವ್ಯ, ಅಂಕಿತ, ಧನ್ಯ, ಆದಿರಾ, ಸಂಸ್ಥೆಯ ವಿಚಾರಕ ಅನಿಶ್ ಹಾಗೂ ಶಿಬಿರಾರ್ಥಿಗಳು ಇದ್ದರು.  
ಜಿಲ್ಲೆ

ಮಹನೀಯರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಿ

ಸುಂಟಿಕೊಪ್ಪ: ಮಾದಾಪುರ ಎಸ್‌ಜೆಎಂ ಶಾಲೆ ವತಿಯಿಂದ 40 ದಿನಗಳ ಬೇಸಿಗೆ ಶಿಬಿರಕ್ಕೆ ಶನಿವಾರ ಬೆಟ್ಟದಪುರದ ಮುರುಗಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಈ ಶಿಬಿರದಿಂದ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೆಚ್ಚಿಸಿಕೊಳ್ಳಲು ಸೂಕ್ತ ವೇದಿಕೆಯಾಗಿದೆ. ಇದರಿಂದ ಸಾಕಷ್ಟು ಶಿಕ್ಷಣ ಸೇರಿದಂತೆ ಸಾಮಾಜಿಕ ವಿಚಾರಧಾರೆಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡುವಂತಾಗಬೇಕು ಎಂದರು.

ನುರಿತ ತರಬೇತುದಾರರಿಂದ ಕ್ರಿಕೆಟ್ ಹಾಗೂ ಕಬಡ್ಡಿ ತರಬೇತಿ ನೀಡಲಾಗುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಮುಂದಿನ ದಿನಗಳಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ ಪಾಲಕರಿಗೂ, ಶಾಲೆ ಹಾಗೂ ಊರಿಗೆ ಕೀರ್ತಿ ತರಲು ಈ ಶಿಬಿರ ಸಹಕಾರಿಯಾಗಲಿ ಎಂದು ಮೋಕ್ಷಪತಿ ಸ್ವಾಮೀಜಿ ಹೇಳಿದರು.

ಬೇಸಿಗೆ ಶಿಬಿರದಲ್ಲಿ ಕ್ರಿಕೆಟ್, ಕಬ್ಬಡಿ,ಶಾಸ್ತ್ರೀಯ ನೃತ್ಯ ಮತ್ತು ಇನ್ನಿತರ ಮನೋರಂಜನಾ ಆಟೋ ತರಬೇತಿ ನೀಡಲಾಗುವುದು. ಶಾಲಾ ಶಿಕ್ಷಕಿ ಪ್ರಿಯಾ, ಪ್ರಜ್ಞ್ಞಾ, ನಿವೇದಿತಾ, ಜೂರ, ಲವ್ಯ, ಅಂಕಿತ, ಧನ್ಯ, ಆದಿರಾ, ಸಂಸ್ಥೆಯ ವಿಚಾರಕ ಅನಿಶ್ ಹಾಗೂ ಶಿಬಿರಾರ್ಥಿಗಳು ಇದ್ದರು.