ಮುಧೋಳದ ರಾಘವೇಂದ್ರಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಗಳನ್ನು ಸತ್ಕರಿಸಲಾಯಿತು. ಡಾ.ಗಿರೀಶ ಮಾಸೂರಕರ, ಬಾಲಚಂದ್ರ ಬಕ್ಷಿ, ವಿದ್ವಾನ ಯಜ್ಞವಲಕ್, ಅಶೋಕ ಕುಲಕರ್ಣಿ ವೆಂಕಟೇಶ ನ್ಯಾಮಣ್ಣವರ, ಸಂಜೀವ ಮೊಕಾಸಿ, ಶ್ರದ್ಧಾ ಕಾಖಂಡಕಿ ಇದ್ದರು. 
ಜಿಲ್ಲೆ

ರಾಮನ ಆದರ್ಶ ಅಳವಡಿಸಿಕೊಳ್ಳಿ

ವಿನಯ ಆಶೋಕ ನಾಯ್ಕ

ಮುಧೋಳ: ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪಿಸಿದಂತೆ ಪ್ರತಿಯೊಬ್ಬ ಭಾರತೀಯನು ಮನಸ್ಸಿನಲ್ಲಿ ರಾಮನ ಆದರ್ಶ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥರು ಹೇಳಿದರು.

ನಗರದ ಶ್ರೀ ರಾಘವೇಂದ್ರ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುಗಳು ಹಿಂದುಗಳಾಗಿ ಉಳಿದರೆ ಮಾತ್ರ ಸೂರ್ಯ-ಚಂದ್ರ ಇರುವವರೆಗೂ ಅಯೋಧ್ಯೆಯಲ್ಲಿ ರಾಮ ಮಂದಿರ ಉಳಿಯಲು ಸಾಧ್ಯ. ಮಕ್ಕಳು ತಪ್ಪ ದಾರಿ ಹಿಡಿಯದಂತೆ ಪಾಲಕರು ನಿಗಾವಹಿಸಬೇಕು. ಈಗ ರಾಮ ಮಂದಿರದ ನಿರ್ಮಾಣವಾಗಿದೆ. ಇನ್ನೂ ರಾಮರಾಜ್ಯ ನಿರ್ಮಾಣವಾಗಬೇಕಿದೆ ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ. ಗಿರೀಶ ಮಾಸೂರಕರ ಮಾತನಾಡಿ, ಪೇಜಾವರ ಶ್ರೀಗಳು ನೆರವೇರಿಸಿರುವ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳ ಬಗ್ಗೆ ವಿವರಿಸಿದರು.

ಗೋದಾವರಿ ಬಯೋರಿಫೈನರಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಬಕ್ಷಿ, ವಿದ್ವಾನ ಯಜ್ಞವಲಕ್, ಅಶೋಕ ಕುಲಕರ್ಣಿ ಮಾತನಾಡಿದರು.

ವೆಂಕಟೇಶ ದೇವಾಲಯದಿಂದ ಶ್ರೀ ರಾಘವೇಂದ್ರ ಮಠದವರೆಗೆ ಆಯೋಜಿಸಿದ್ದ ಶೋಭಾಯಾತ್ರೆಗೆ ಸಂಸದ ಗೋವಿಂದ ಕಾರಜೋಳ ಚಾಲನೆ ನೀಡಿದರು.

ಸ್ವಾಗತ ಸಮಿತಿ ಅಧ್ಯಕ್ಷ ಸೋನಪ್ಪಿ ಕುಲಕರ್ಣಿ, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಸದರ್ಮ ಮಂಡಳದ ಅಧ್ಯಕ್ಷ ಪ್ರಲ್ಹಾದರಾವ ದೇಶಪಾಂಡೆ, ವಿದ್ವಾನ್ ಪಾಂಡುರಂಗಾಚಾರ್ಯ ಜೋಷಿ, ಋಷಿಕೇಶಾಚರ್ಯ ಜೋಷಿ, ಆನಂದ ಜೇರೆ ಮತ್ತಿತರರಿದ್ದರು.

ವೆಂಕಟೇಶ ನ್ಯಾಮಣ್ಣವರ, ಸಂಜೀವ ಮೊಕಾಸಿ ವೇದಘೋಷ ಮಾಡಿದರು. ಶ್ರದ್ಧಾ ಕಾಖಂಡಕಿ ಪ್ರಾರ್ಥಿಸಿದರು. ಸೋನಪ್ಪಿ ಕುಲಕರ್ಣಿ ಸ್ವಾಗತಿಸಿದರು. ಸುಬ್ಬಣ್ಣಾಚಾರ್ಯ ಮನಗೂಳಿ ನಿರೂಪಿಸಿದರು. ಗಿರೀಶ ಆನಿಖಿಂಡಿ ವಂದಿಸಿದರು.