ಮುಂಡರಗಿ: ನುಲಿಯ ಚಂದಯ್ಯ ಅವರು ಶ್ರೇಷ್ಠ ಕಾಯಕದ ಜೀವಿಗಳಾಗಿದ್ದಾರೆ. ಶರಣ ನುಲಿಯ ಚಂದಯ್ಯನವರು ಸೇರಿ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಮುಂದಾದರು. ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಪಟ್ಟಣದ ಶರಣ ನೂಲಿ ಚಂದಯ್ಯ ವೃತ್ತದಲ್ಲಿ ತಾಲೂಕು ಕೊರಮ ಕ್ಷೇಮಾಭಿವೃದ್ಧಿ ಸಂಘ, ನುಲಿಯ ಚಂದಯ್ಯ ಯುವಕ ಸಂಘ ಹಾಗೂ ಆದಿಶಕ್ತಿ ಹುಲಿಗೆಮ್ಮದೇವಿ ಕೊರಮ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶರಣ ನುಲಿಯ ಚಂದಯ್ಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಸಮಸಮಾಜ ನಿರ್ವಣಕ್ಕೆ ಮುಂದಾಗಿ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದರು. ನುಲಿಯ ಚಂದಯ್ಯ ಅವರು ಹುಲ್ಲು ತಂದು ಹಗ್ಗ ಹೊಸೆದು ಮಾರಿ ಬಂದ ಹಣದಿಂದ ದಾಸೋಹ ನಡೆಸುತ್ತಿದ್ದ ಕಾಯಕಯೋಗಿ. ಕಾಯಕಕ್ಕೆ ತಮ್ಮದೆ ಆದ ಮಹತ್ವ ನೀಡಿದರು ಎಂದರು.
ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ, ಪಾಲಾಕ್ಷಿ ಗಣದಿನ್ನಿ ಮಾತನಾಡಿದರು. ಅಖಿಲ ಕರ್ನಾಟಕ ಕೊರಮರ ಸಂಘದ ರಾಜ್ಯ ನಿರ್ದೇಶಕ ರಾಮು ಭಜಂತ್ರಿ, ಕೊರಮ ಸಮಾಜದ ಶಹರ ಘಟಕದ ಅಧ್ಯಕ್ಷ ಮಾರುತೆಪ್ಪ ಭಜಂತ್ರಿ, ಕರಬಸಪ್ಪ ಹಂಚಿನಾಳ, ರಾಮಚಂದ್ರ ಕಲಾಲ, ಪುರಸಭೆ ಸದಸ್ಯರಾದ ಕವಿತಾ ಉಳ್ಳಾಗಡ್ಡಿ, ರಾಜಾಭಕ್ಷಿ ಬೆಟಗೇರಿ, ಕಿಟ್ಟಪ್ಪ ಮೋರನಾಳ, ಮಂಜುನಾಥ ಮುಧೋಳ, ರಾಘವೇಂದ್ರ ಪಾಟೀಲ, ಹನುಮಂತ ಭಜಂತ್ರಿ, ಪ್ರಕಾಶ ಭಜಂತ್ರಿ, ಶಿವಾನಂದ ಭಜಂತ್ರಿ, ಶಿವಗ್ಯಾನಪ್ಪ ಭಜಂತ್ರಿ, ಯಮನಪ್ಪ ಭಜಂತ್ರಿ, ಹುಲಗಪ್ಪ ಭಜಂತ್ರಿ, ಸುರೇಶ ಭಜಂತ್ರಿ, ಶಿವು ಭಜಂತ್ರಿ, ಮಂಜಪ್ಪ ಭಜಂತ್ರಿ, ಮಂಜು ಕಟ್ಟಿಮನಿ, ಇತರರಿದ್ದರು.
ಹುಲಿಗೆಮ್ಮ ಭಜಂತ್ರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಿಂಗರಾಜ ಹಾಲಿನವರ ನಿರ್ವಹಿಸಿದರು.