ಸಿರವಾರ: ಗಂಡುಗಲಿ ಕುಮಾರರಾಮ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಪಪಂ ಮಾಜಿ ಸದಸ್ಯ ಚಿನ್ನಾನ್ ನಾಗರಾಜ ಹೇಳಿದರು.
ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಗಂಡುಗಲಿ ಕುಮಾರರಾಮ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಬುಧವಾರ ಮಾತನಾಡಿದರು.
ಕುಮಾರರಾಮರ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಾರ್ವಜನಿಕರ ಏಳಿಗೆಗಾಗಿ ನೀರಾವರಿ ವ್ಯವಸ್ಥೆ, ಯುದ್ಧ ತಂತ್ರಗಾರಿಕೆ, ಕನ್ನಡ ಧರ್ಮ ಸಾಮ್ರಾಜ್ಯ ಕಟ್ಟಬೇಕು ಎಂದು ಸಂಕಲ್ಪ ಮಾಡಿದ್ದರು ಎಂದರು.
ಪಪಂ ಮಾಜಿ ಉಪಾಧ್ಯಕ್ಷ ಗಡ್ಲ ಚನ್ನಬಸವ, ಸದಸ್ಯ ಸೂರಿ ದುರಗಣ್ಣ ನಾಯಕ, ರಂಗನಾಥ ನಾಯಕ, ಮಲ್ಲಿಕಾರ್ಜುನ ನಾಯಕ, ರಾಜಾ ಮುಂಡೆವಾಡಿ, ಅಬ್ದುಲ್ ಇದ್ದರು.