ಹಾವಿನಹಾಳು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಜನ ವೇದಿಕೆಯ ನಾಮಫಲಕ ಉದ್ಘಾಟಿಸಲಾಯಿತು. ವಕೀಲರಾದ ಸೋಮಶೇಖರ್ ಮಣ್ಣೂರು, ರಾಂಬಾಬು, ಕಾಡಪ್ಪ, ಸುರೇಶಗೌಡ, ಶರಣಪ್ಪ, ಮಾಸ್ತಿ ಮಲ್ಲಿಕಾರ್ಜುನ, ಭರತ್‌ಕುಮಾರ ಇತರರಿದ್ದರು. 
ಜಿಲ್ಲೆ

ಡಾ.ಅಂಬೇಡ್ಕರ್ ತತ್ವಾದರ್ಶ ಅಳವಡಿಸಿಕೊಳ್ಳಿ

ನರೇಶ್ ಕುಮಾರ್

ಸಿರಿಗೇರಿ: ಸಮೀಪದ ಹಾವಿನಹಾಳು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಜನ ವೇದಿಕೆಯಿಂದ ಸಂಘದ ನಾಮಫಲಕ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ವಕೀಲ ಸೋಮಶೇಖರ್ ಮಣ್ಣೂರು ಮಾತನಾಡಿ, ಡಾ.ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ದೇಶದ ಸರ್ವರಿಗೂ ಸಮಾನ ಅವಕಾಶ ನೀಡಿದವರು. ದಲಿತ ವರ್ಗದವರು ತಲೆ ಎತ್ತುವಂತೆ ಮಾಡಿದರು.

ಪ್ರತಿಯೊಬ್ಬರೂ ಸಂವಿಧಾನದ ಮಹತ್ವ ಅರಿಯಬೇಕು. ಡಾ.ಅಂಬೇಡ್ಕರ್ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಕೀಲ ರಾಂಬಾಬು, ಮುಖಂಡ ಬಿ.ಸಣ್ಣರಾಮಯ್ಯ ಮಾತನಾಡಿದರು.

ಪ್ರಮುಖರಾದ ಎಚ್.ಲಕ್ಷ್ಮಣ ಭಂಡಾರಿ, ಎಚ್.ದುರುಗಪ್ಪ, ಕಾಡಪ್ಪ, ಸುರೇಶಗೌಡ, ಶರಣಪ್ಪ, ಮಾಸ್ತಿ ಮಲ್ಲಿಕಾರ್ಜುನ, ಭರತ್‌ಕುಮಾರ, ಮಾರೇಶ, ಪರುಸಪ್ಪ, ಎಚ್.ಮುನೆಪ್ಪ, ಜಡೆಪ್ಪ, ಮೌಲಪ್ಪ, ಸುರೇಶ ಇತರರಿದ್ದರು. ಪಿಯುಸಿ ಕಲಾ ವಿಭಾಗದಲ್ಲಿ ಶೇ.91 ಅಂಕ ಪಡೆದ ಲೋಕೇಶ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಶೇ.76 ಅಂಕ ಗಳಿಸಿದ ಭಾವನಾ ಅವರನ್ನು ಸನ್ಮಾನಿಸಲಾಯಿತು.