ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬುದ್ಧ ಪೂರ್ಣಮೆ ಅಂಗವಾಗಿ ಗೌತಮ ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಬಿ.ಎಂ.ಸತ್ಯ, ಬಿ.ನಾಗರಾಜಮೂರ್ತಿ, ಬಿ.ಎಸ್.ಕೃಷ್ಣಯ್ಯ, ಬಿ.ಎಸ್.ಕೃಷ್ಣಯ್ಯ, ಮುಖಂಡರಾದ ರಾಮಕೃಷ್ಣಯ್ಯ, ಬಿ.ಆರ್.ನಾಗರಾಜ, ಎಂ.ಎಸ್.ಕಿರಣ್, ಶಿವಣ್ಣ, ಸಿದ್ದರಾಜು, ರಮೇಶ್ ಇದ್ದರು 
ಜಿಲ್ಲೆ

ಬುದ್ಧನ ಪಂಚಶೀಲಾ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಮದ್ದೂರು: ಗೌತಮ ಬುದ್ಧನ ಪಂಚಶೀಲಾ ತತ್ವಗಳನ್ನು ಕೇವಲ ಆಚರಣೆ ಮಾಡದೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಬಿ.ಎಸ್.ಸತ್ಯ ಹೇಳಿದರು.

ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಬುದ್ಧ ಪೂರ್ಣಮೆ ಅಂಗವಾಗಿ ಗೌತಮ ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಗೌತಮ ಬುದ್ಧ ಪಂಚಶೀಲಾ ತತ್ವಗಳನ್ನು ಜಗತ್ತಿಗೆ ಸಾರುವ ಮೂಲಕ ಶಾಂತಿ ನೆಲಸುವಂತೆ ಮಾಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಜೀವಿತಾವಧಿ ಕೊನೆಯಲ್ಲಿ ಭೌದ್ಧ ಧರ್ಮ ಸೇರುವ ಮೂಲಕ ಭಾರತ ಬಹುಜನರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಆದರೆ, ಬುದ್ಧನನ್ನು ಅರ್ಥ ಮಾಡಿಕೊಳ್ಳುವಲ್ಲಿ ಭಾರತ ಎಡವಿವೆ ಎಂದರು.

ಗ್ರಾಪಂ ಸದಸ್ಯ ಬಿ.ನಾಗರಾಜಮೂರ್ತಿ, ನಿವೃತ್ತ ಎಎಸ್‌ಐ ಎಸ್.ಎಂ.ಪುಟ್ಟಸ್ವಾಮಿ, ಪಿಎಸ್‌ಸಿಎಸ್ ನಿರ್ದೇಶಕ ಬಿ.ಎಸ್.ಕೃಷ್ಣಯ್ಯ, ಮುಖಂಡರಾದ ರಾಮಕೃಷ್ಣಯ್ಯ, ಬಿ.ಆರ್.ನಾಗರಾಜ, ಎಂ.ಎಸ್.ಕಿರಣ್, ಶಿವಣ್ಣ, ಸಿದ್ದರಾಜು, ರಮೇಶ್ ಇದ್ದರು.