ತರೀಕೆರೆ: ಗಿಡ, ಮರ ಪೋಷಣೆಯಿಂದ ಪರಿಸರ ಅಸಮತೋಲಿತವಾಗಿರಲಿದೆ ಎಂದು ಗ್ರಾಪಂ ಅಧ್ಯಕ್ಷ ಎನ್.ರಾಮೇಗೌಡ ಹೇಳಿದರು.
ಎಂ.ಸಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾನಿಗಳು ಕೊಡುಗೆಯಾಗಿ ನೀಡಿದ ವಿವಿಧ ಜಾತಿಯ 30ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಮಾತನಾಡಿದರು. ಅಲ್ಲಲ್ಲಿ ಸಮೃದ್ಧವಾಗಿ ಗಿಡ-ಮರ ಬೆಳೆದು ನಿಂತರೂ, ತೀವ್ರಗೊಳ್ಳುತ್ತಿರುವ ತಾಪಮಾನ ಜನರನ್ನು ಹೈರಾಣಗೊಳಿಸುತ್ತಿದೆ. ಉತ್ತಮ ವಾತಾವರಣಕ್ಕೆ ಗಿಡ, ಮರ ಬೆಳೆಸುವ ಅನಿವಾರ್ಯತೆ ಇದ್ದು, ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಆಸಕ್ತಿ ವಹಿಸಬೇಕು. ಈ ದಿಸೆಯಲ್ಲಿ ಒಂದೊಂದು ಗಿಡ ದತ್ತು ಪಡೆದು ಪೋಷಣೆ ಮಾಡಬೇಕು ಎಂದು ಹೇಳಿದರು. ಡಾ. ಜಗದೀಶ್, ಡಾ. ನೀಲೇಶ್‌ರಾಜ್, ಆರ್.ದಿನೇಶ್, ಡಿ.ರಾಜಶೇಖರ್, ಸದಾಶಿವ ಇತರರಿದ್ದರು.