ಜಿಲ್ಲೆ

ದೇಶದ ಘನತೆ ಹೆಚ್ಚಿಸುವಂತ ಕೆಲಸ ರೂಢಿಸಿಕೊಳ್ಳಿ

ವಿಜಯಪುರ:ನುಡಿದಂತೆ ನಡೆಯುವುದು, ಸತ್ಯ ಹೇಳುವುದು, ತ್ಯಾಗದಿಂದ ಬದುಕುವುದು, ಸಾಮಾಜಿಕ ಪರಿವರ್ತನೆಗೆ ದುಡಿಯುವುದು ಮತ್ತು ಅಹಿಂಸಾ ಮಾರ್ಗ ಅನುಸರಿಸಿ ಹೋರಾಟದ ಜತೆಗೆ ರಚನಾತ್ಮಕ ಕಾರ್ಯಕ್ರಮ ರೂಪಿಸುವುದೇ ಎನ್​ಎಸ್​ಎಸ್​ ಮುಖ್ಯ ಧ್ಯೇಯ ಎಂದು ಎನ್​ಎಸ್​ಎಸ್​ ತಾಲೂಕು ಸಂಯೋಜನಾಧಿಕಾರಿ ರಾಜು ಕಪಾಳಿ ಹೇಳಿದರು.ನಗರದ ಸ್ವಾಮಿ ವಿವೇಕಾನಂದ ಕಲಾ ವಾಣಿಜ್ಯ ಹಾಗೂ ವಿಾನ ಮಹಾವಿದ್ಯಾಲಯದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ದೇಶದ ಉನ್ನತಿಗಾಗಿ ಶ್ರಮಿಸಬೇಕು ಮತ್ತು ದೇಶದ ನತೆ ಹೆಚ್ಚಿಸುವಂತಹ ಕೆಲಸ ಕಾರ್ಯಗಳನ್ನು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಚಾರ್ಯ ರಮೇಶ ಲೋಗಾಮಿ ಅಧ್ಯತೆ ವಹಿಸಿದ್ದರು. ಸಂತೋಷ ಪೂಜಾರಿ, ಎನ್​.ಬಿ. ಚೌದರಿ ಮತ್ತಿತರರಿದ್ದರು.

ವಿಜಯಪುರದ ಸ್ವಾಮಿ ವಿವೇಕಾನಂದ ಕಲಾ ವಾಣಿಜ್ಯ ಹಾಗೂ ವಿಾನ ಮಹಾವಿದ್ಯಾಲಯದಲ್ಲಿ ಎನ್​ಎಸ್​ಎಸ್​ ಕಾರ್ಯಕ್ರಮ ನಡೆಯಿತು. ರಾಜು ಕಪಾಳಿ, ರಮೇಶ ಲೋಗಾಮಿ, ಸಂತೋಷ ಪೂಜಾರಿ ಮತ್ತಿತರರಿದ್ದಾರೆ.