ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭಿಸಲಾಗಿದೆ ಎಂದು ಧಾರವಾಡ ಕೇಂದ್ರದ ಸಂಯೋಜಕ ನಾಗರಾಜ ಎಚ್.ಎನ್. ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವಿ ಹಂತದಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಎಸ್ಸಿ ಐಟಿ, ಬಿಎಸ್ಸಿ ಹೋಂ ಸೈನ್ಸ್, ಬಿಬಿಎ, ಬಿಸಿಎ, ಡಿಪ್ಲೋಮಾ ಸೇರಿ 60ಕ್ಕೂ ಕೋರ್ಸ್ಗಳಿಗೆ ಪ್ರವೇಶಾತಿ ಆರಂಭಿಸಲಾಗಿದೆ. ಆಟೋ, ಕ್ಯಾಬ್ ಚಾಲಕರ ಮಕ್ಕಳು, ಬಿಪಿಎಲ್ ಮಹಿಳೆಯರಿಗೆ, ಮಾಜಿ ಸೈನಿಕರಿಗೆ, ತೃತೀಯ ಲಿಂಗಿ ಮತ್ತು ದೃಷ್ಠಿದೋಷ ಮತ್ತು ಕೋವಿಡ್ನಲ್ಲಿ ಮೃತ ಪಾಲಕರ ಮಕ್ಕಳಿಗೆ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ ಎಂದರು.
ಆಸಕ್ತರು ಎಸ್ಸೆಸ್ಸೆಲ್ಸಿ, ಪಿಯು
ಸಿ, ಪದವಿ ಅಂಕಪಟ್ಟಿ, ಆಧಾರ್, ಭಾವಚಿತ್ರ ಸಹಿತ ಝರಾಕ್ಸ್, ಮೂಲ ಅಂಕಪಟ್ಟಿಯೊಂದಿಗೆ ಪ್ರವೇಶ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಉದ್ಯೋಗ ಭವನ, ಕೆಎಚ್ಎಸ್ಎಂ ಕಟ್ಟಡ, ಜುಬುಲಿ ವೃತ್ತ ಬಳಿಯ ಕಚೇರಿಗೆ ಭೇಟಿ ನೀಡಬಹುದು ಎಂದರು.