ಜಿಲ್ಲೆ

ವಿವಿಗಳಲ್ಲಿ ಪ್ರವೇಶಾತಿ ಕ್ಷೀಣ: ಅನುದಾನಕ್ಕಿಲ್ಲ ಕೊರತೆ, ವಿದ್ಯಾರ್ಥಿಗಳ ಸೆಳೆಯುವಲ್ಲಿ ವಿಫಲ

ರಮೇಶ್​ ಕುಮಾರ್​​ ಬಿ ಎಡಮೋಳೆ

| ದೇವರಾಜ್ ಎಲ್. ಬೆಂಗಳೂರು

ರಾಜ್ಯದಲ್ಲಿ 25 ಸರ್ಕಾರಿ, 10 ಖಾಸಗಿ ಮತ್ತು 15 ಡೀಮ್್ಡ ವಿವಿಗಳಿವೆ. ಕರೊನಾ ಮಧ್ಯೆಯೂ ಬಹುತೇಕ ವಿವಿಗಳಿಗೆ ಸರ್ಕಾರದಿಂದ ದೊರೆಯುವ ಅನುದಾನಕ್ಕೆ ತೊಂದರೆಯಾಗಿಲ್ಲ. ಆದರೆ, ವಿದ್ಯಾರ್ಥಿಗಳ ಪ್ರವೇಶ ಹೆಚ್ಚಳ ಮಾಡುವ ಹೊಣೆಗಾರಿಕೆ ನಿಭಾಯಿಸುವಲ್ಲಿ ಮಾತ್ರ ವಿವಿಗಳು ಸೋತಿವೆ.

ಅನುದಾನ ಸದ್ಬಳಕೆ ಮಾಡಿಕೊಂಡು ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ವಿವಿಗಳು ವಿಫಲವಾಗುತ್ತಿರುವುದು ಒಂದೆಡೆಯಾದರೆ, ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸರ್ಕಾರ ನಿಯಮ ಸಡಿಲಿಕೆ ಮಾಡಿರುವುದು ಸರ್ಕಾರಿ ವಿವಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರುವ ಆತಂಕ ಎದುರಾಗಿದೆ.

ಖಾಸಗಿ ವಿವಿ ಆರಂಭಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿ 25 ಎಕರೆ ಜಮೀನು ಹೊಂದಿರಬೇಕೆಂಬ ನಿಯಮವಿದೆ. ಇದಕ್ಕೆ ತಿದ್ದುಪಡಿ ತಂದ ಉನ್ನತ ಶಿಕ್ಷಣ ಇಲಾಖೆ, ಎರಡು ಕಡೆಗಳಲ್ಲಿ ಕ್ಯಾಂಪಸ್ ಮಾಡಿ ಒಟ್ಟು 25 ಎಕರೆ ಪ್ರದೇಶ ಇರಬಹುದೆಂದು ನಿಯಮ ಸಡಿಲಿಸಿದೆ. ಇದರಿಂದ ಹೊಸ ವಿವಿ ಆರಂಭಿಸುವುದು ಸುಲಭವಾದಂತಾಗಿದೆ.

ಸಂಗೀತ ವಿವಿ: ಮೈಸೂರಿನಲ್ಲಿರುವ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ 2008-09ನೇ ಸಾಲಿನಲ್ಲಿ ಆರಂಭವಾಗಿದೆ. 2010-11ನೇ ಸಾಲಿನಿಂದ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ. ಮೊದಲ ವರ್ಷ ಬಿಎಗೆ ಯಾರೂ ಪ್ರವೇಶ ಪಡೆದಿರಲಿಲ್ಲ. ಎಂಎ ಕೋರ್ಸ್​ಗೆ

ಕೇವಲ 5 ಅಭ್ಯರ್ಥಿಗಳು ಪ್ರವೇಶ ಪಡೆದಿದ್ದರು. ಇದರ ಪ್ರಮಾಣ 2018-19ನೇ ಸಾಲಿನಲ್ಲಿ ಅನುಕ್ರಮವಾಗಿ 43 ಮತ್ತು 51ಕ್ಕೆ ಹೆಚ್ಚಳವಾಗಿದೆ. 2019-20ರಲ್ಲಿ ಬಿ.ಎ. ಕೋರ್ಸ್​ಗೆ 33 ಮತ್ತು ಎಂ.ಎ. ಕೋರ್ಸ್​ಗೆ 31 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಪ್ರವೇಶ ಕ್ರಮೇಣ ಇಳಿಕೆಯಾಗುತ್ತಿದ್ದರೂ ವಿವಿಗಳು ಗಂಭೀರ ನಿಲುವು ತಾಳುತ್ತಿಲ್ಲ. ಕಳೆದ 10 ವರ್ಷಗಳಲ್ಲಿ 518 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ವಿವಿಗೆ ಸರ್ಕಾರ 2010-11ರಲ್ಲಿ 1 ಕೋಟಿ ರೂ. ಅನುದಾನ ನೀಡಿದ್ದು, ಕ್ರಮೇಣ ಹೆಚ್ಚಿಸುತ್ತ ಹೋಗಿದೆ. ಹಿಂದಿನ 10 ವರ್ಷದಲ್ಲಿ 40.05 ಕೋಟಿ ರೂ. ಅನುದಾನ ನೀಡಿದೆ.

ಶ್ರೀಕೃಷ್ಣದೇವರಾಯ ವಿವಿ: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ 2010ರಲ್ಲಿ ಆರಂಭವಾಗಿದೆ.10 ವರ್ಷದಲ್ಲಿ ಪದವಿಗೆ 16,384 ಮತ್ತು ಸ್ನಾತ ಕೋತ್ತರ ಪದವಿಗೆ 1,15,558 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 18.74 ಕೋಟಿ ರೂ.ನಿಂದ ಆರಂಭವಾದ ಅನುದಾನ 135 ಕೋಟಿ ರೂ.ಗೆ ತಲುಪಿದೆ.

ಬೆಂಗಳೂರು ಉತ್ತರ ವಿವಿ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು 2018-19ರಿಂದ ಆರಂಭಗೊಂಡಿದೆ. ಕಳೆದ 2 ವರ್ಷಗಳಲ್ಲಿ ಪದವಿ- 54,987 ಮತ್ತು ಸ್ನಾತಕೋತ್ತರ ಪದವಿಗೆ 5,975 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಎರಡು ವರ್ಷಕ್ಕೆ 29.55 ಕೋಟಿ ರೂ. ಅನá-ದಾನ ಬಿಡುಗಡೆಯಾಗಿದೆ.

ಬೆಂಗಳೂರು ವಿವಿ: ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯ ತ್ರಿಭಜನೆಯಾದ ನಂತರ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಕ್ಷೀಣಿಸಿದೆ. 2014-15ರಲ್ಲಿ ಪದವಿಗೆ 69,582 ಮತ್ತು ಸ್ನಾತಕೋತ್ತರ ಪದವಿಗೆ 15,068 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. 2019-20ನೇ ಸಾಲಿಗೆ ಅನá-ಕ್ರಮವಾಗಿ 25,912 ಮತ್ತು 7,419 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಸಮಸ್ಯೆ ಕಡಿಮೆಯಾಗಿಲ್ಲ

ಸರ್ಕಾರಿ ವಿವಿಗಳಿಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ರಾಷ್ಟ್ರೀಯ ಉಚ್ಚ ಶಿಕ್ಷಣ ಅಭಿಯಾನ (ರುಸಾ) ಸೇರಿ ಹಲವಾರು ಮೂಲಗಳಿಂದ ಅನುದಾನ ಬಂದರೂ ಮೂಲಸೌಕರ್ಯ ಕೊರತೆ ನೀಗದಿರುವುದು ದುರಂತವೇ ಸರಿ. ಶುದ್ಧ ಕುಡಿಯುವ ನೀರು, ಶೌಚಗೃಹದಲ್ಲಿನ ಸ್ವಚ್ಛತೆ ಸರ್ಕಾರಿ ವಿವಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ. ಬಹುತೇಕ ಬಾರಿ ಅನುದಾನ ಬಳಕೆ ಮಾಡಿಕೊಳ್ಳುವ ವಿಭಾಗಗಳು, ಬಳಕೆಯ ಪ್ರಮಾಣ ಪತ್ರ (ಯುಸಿ) ಸಲ್ಲಿಸುವುದನ್ನೇ ಮರೆತಿರುತ್ತವೆ. ಇದರಿಂದ ಅನುದಾನ ಸಮರ್ಪಕವಾಗಿ ಬಳಕೆಯಾಗಿರುವುದಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಸರ್ಕಾರದಿಂದ ದೊರೆಯುವ ಅನುದಾನ ಪಡೆದುಕೊಳ್ಳುವುದಕ್ಕಾಗಿ ವಿವಿ ಆರಂಭಿಸ ಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಶಾಶ್ವತವಾಗಿ ಅನುದಾನ ನೀಡುವುದಿಲ್ಲ. ನಂತರ ವಿವಿ ನಿರ್ವಹಣೆ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುತ್ತದೆ. ವಿದ್ಯಾರ್ಥಿಗಳನ್ನು ಆಕರ್ಷಿಸುವಂತಹ ಕೋರ್ಸ್​ಗಳನ್ನು ಆರಂಭಿಸಬೇಕು. | ಎಂ.ಎಸ್. ತಿಮ್ಮಪ್ಪ ಬೆಂವಿವಿ ವಿಶ್ರಾಂತ ಕುಲಪತಿ