ಜಿಲ್ಲೆ

ನೌಕಾ ನೆಲೆಗೆ ಅಡ್ಮಿರಲ್ ಸಿಂಗ್ ಭೇಟಿ

ಸುಭಾಸ ಹೆಗಡೆ ಧೂಪದಹೊಂಡ

ಕಾರವಾರ: ಭಾರತೀಯ ನೌಕಾ ಸೇನೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಶನಿವಾರ ಇಲ್ಲಿನ ಕದಂಬ ನೌಕಾ ನೆಲೆಗೆ ಭೇಟಿ ನೀಡಿ, ಸೀಬರ್ಡ್ ನೌಕಾ ಯೋಜನೆಯ ಎರಡನೇ ಹಂತದ ವಿಸ್ತರಣೆ ಕಾಮಗಾರಿ ಪ್ರಗತಿ ಪರಿಶೀಲಿಸಿದರು.

ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿದ ಅವರು, ಕಾಮಗಾರಿಗಳ ಬಗ್ಗೆ ಸಲಹೆ, ಸೂಚನೆ ನೀಡಿದರು. ಕರ್ನಾಟಕ ನೌಕಾ ವಲಯದ ಸಿಬ್ಬಂದಿ, ನಾವಿಕರ ಜತೆ ರ್ಚಚಿಸಿದ ಅವರು, ಕೈಗೊಂಡ ಕೆಲ ಕ್ರಮಗಳ ಕುರಿತು ಶ್ಲಾಘಿಸಿದರು.

ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಮಹೇಶ ಸಿಂಗ್, ಸೀಬರ್ಡ್ ಯೋಜನೆಯ ಡಿಜಿ ವೈಸ್ ಅಡ್ಮಿರಲ್ ಶ್ರೀಕಾಂತ್ ಅವರು ಅಡ್ಮಿರಲ್ ಕರಂಬೀರ್ ಅವರನ್ನು ಸ್ವಾಗತಿಸಿ ಯೋಜನೆಗಳ ವಿವರ ನೀಡಿದರು.