ಜಿಲ್ಲೆ

ಆಡಳಿತ ವೈಲ್ಯವೋ... ಜನಪ್ರತಿನಿಧಿಗಳ ರ್ನಿಲಕ್ಷ್ಯವೋ?

ಪಿ.ಮಂಜುನಾಥರೆಡ್ಡಿ ಬಾಗೇಪಲ್ಲಿ

ದೇಶ ಸ್ವತಂತ್ರವಾಗಿ ಏಳು ದಶಕಗಳೇ ಕಳೆದರೂ ಇಲ್ಲೊಂದು ಗ್ರಾಮ ಇಂದಿಗೂ ರಸ್ತೆ, ಬಸ್​, ಶುದ್ಧ ನೀರಿನ ಸೌಲಭ್ಯ ಕಂಡಿಲ್ಲ. ಇದು ಜಿಲ್ಲಾ, ತಾಲೂಕು ಆಡಳಿತದ ವೈಲ್ಯವೋ... ಅಥವಾ ಅಧಿಕಾರಿಗಳು, ಜನಪ್ರತಿನಿಧಿಗಳ ರ್ನಿಲಕ್ಷ$್ಯವೋ ಎಂಬುದನ್ನು ಅರಿಯಲು ಸಾಧ್ಯವಾಗದೆ ದೇಶಮಾರು ತಾಂಡಾದ 25 ಕುಟುಂಬಗಳು ಸಂಕಷ್ಟದಲ್ಲೇ ಬದುಕು ಸಾಗಿಸುತ್ತಿವೆ. ಬಾಗೇಪಲ್ಲಿ ತಾಲೂಕಿನ ಕಾನಗಮಾಕಲಪಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿರುವ ದೇಶಮಾರ ತಾಂಡಾದಲ್ಲಿ 25 ಲಂಬಾಣಿ ಕುಟುಂಬಗಳಿದ್ದು, ಬದುಕಿಗಾಗಿ ಕೃಷಿ ಅವಲಂಬಿಸಿವೆ. ಶಾಲಾ, ಕಾಲೇಜುಗಳಿಗೆ ಹೋಗುವ 19 ಮಕ್ಕಳು ಸೇರಿ ಒಟ್ಟು 100ಕ್ಕೂ ಹೆಚ್ಚು ಜನರಿದ್ದಾರೆ. 3 ರಿಂದ 5 ವರ್ಷದ 9, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ಕಲಿಯುತ್ತಿರುವ 10 ಮಕ್ಕಳಿದ್ದಾರೆ. ಶಾಲೆ&ಕಾಲೇಜು ಸೇರಿ ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಪಟ್ಟಣಕ್ಕೆ ತೆರಳುವ ಎಲ್ಲರೂ 4 ಕಿಮೀ ನಡೆದುಕೊಂಡೇ ಹೋಗಬೇಕಾಗಿದೆ. ತಾಂಡಾದಲ್ಲಿ ಪಂಚಾಯಿತಿಯಿಂದ ಕೊಳವೆಬಾವಿ ನೀರು ಪೂರೈಸುತ್ತಿದ್ದು, ಮೂಲಸೌಕರ್ಯಗಳಿಲ್ಲ ಎನ್ನುವುದು ತಾಂಡಾ ವಾಸಿಗಳ ದೂರು.

ರಸ್ತೆ ಭಾಗ್ಯ ಇಲ್ಲ : ದೇಶಮಾರು ತಾಂಡಾಕ್ಕೆ ಇದುವರೆಗೂ ರಸ್ತೆಭಾಗ್ಯ ದೊರೆತಿಲ್ಲ. ವಾಹನಗಳು ಸಂಚರಿಸಲು ಸಾಧ್ಯವಾಗದಷ್ಟು ದುಸ್ಥಿತಿಯಲ್ಲಿದೆ ಇಲ್ಲಿನ ರಸ್ತೆ. ಕಾಡುಕಲ್ಲಿನಿಂದ ಕೂಡಿರುವ ಹದಗೆಟ್ಟ ಕೊರಕಲು ರಸ್ತೆಯಲ್ಲಿ ಯಾವುದೇ ವಾಹನ ಸಂಚರಿಸುವುದಿಲ್ಲ. ಸಾರಿಗೆ ಸಂಸ್ಥೆ ಬಸ್​ ಸೌಲಭ್ಯ ಇಲ್ಲದ ಕಾರಣ ತಾಂಡಾದ ವಿದ್ಯಾರ್ಥಿಗಳು ಶಾಲೆಗೆ ಹೋಗಿಬರಲು ಪರೀೆ ಬರೆಯಲು ನಡೆದು ಸಾಗುವುದು ಅನಿವಾರ್ಯವಾಗಿದೆ. ಇನ್ನು ತುರ್ತು ಆರೋಗ್ಯ ಸಂದರ್ಭಗಳಲ್ಲಿ

ಆಂಬುಲೆನ್ಸ್​ಗಳು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ.

ನೀರಿನ ಘಟಕಕ್ಕಿಲ್ಲ ಉದ್ಘಾಟನೆ ಭಾಗ್ಯ : ದೇಶಮಾರು ತಾಂಡಾದಲ್ಲಿ 2 ವರ್ಷಗಳ ಹಿಂದೆ ಶುದ್ಧ ಕುಡಿಯುವನೀರಿನ ಟಕ ಸ್ಥಾಪಿಸಲಾಗಿದೆ. ಆದರೆ, ಇದುವರೆಗೂ ಟಕ ಉದ್ಘಾಟಿಸಿ ಸೇವೆಗೆ ನೀಡಿಲ್ಲ. ಹಾಗಾಗಿ ತಾಂಡಾ ವಾಸಿಗಳು ಶುದ್ಧ ಕುಡಿಯುವ ನೀರಿ

ಗಾಗಿ 5 ಕಿ.ಮೀ. ದೂರದ ಯಲ್ಲಂಪಲ್ಲಿ ಗ್ರಾಮಕ್ಕೆ ಹೋಗಬೇಕಾಗಿದೆ. ದ್ವಿಚಕ್ರ ವಾಹನ ಇದ್ದವರು ಶುದ್ಧ ನೀರು ತಂದು ಕುಡಿಯುವುದು, ಇಲ್ಲದವರು ಕೊಳವೆಬಾವಿ ನೀರು ಕುಡಿಯಬೇಕು, ಇಲ್ಲವೇ 5 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿ ಯಲ್ಲಂಪಲ್ಲಿಯಿಂದ ನೀರು ತರುವುದು ಅನಿವಾರ್ಯವಾಗಿದೆ.

ತಾಂಡಾ ನಿರ್ಮಾಣ ಮಾಡಿರುವ ಶುದ್ಧ ನೀರಿನ ಟಕ ಕಾಮಗಾರಿ ನಿರ್ವಹಿಸಿದ  ಗುತ್ತಿಗೆದಾರನ ರ್ನಿಲಕ್ಷ$್ಯದಿಂದಾಗಿ ಟಕ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜಿಪಂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ತಾಂಡಾ ರಸ್ತೆ ಅಭಿವೃದ್ಧಿಗೆ ನರೇಗಾ ಅಡಿ ಅನುದಾನ ನೀಡಿ ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. | ಪಾಪಿರೆಡ್ಡಿ ಸದಸ್ಯ, ಕಾನಗಮಾಕಲಪಲ್ಲಿ ಗ್ರಾಪಂ ತಾಂಡಾದಲ್ಲಿ 2 ವರ್ಷಗಳ ಹಿಂದೆ ಕುಡಿಯುವ ನೀರನ ಟಕ ಸ್ಥಾಪಿಸಿದ್ದು, ಜನರ ಸೇವೆಗೆ ಮುಕ್ತಗೊಳಿಸಬೇಕು. ತಾಂಡಾದಿಂದ ಬಾಗೇಪಲ್ಲಿಗೆ ಹೋಗಲು ಬಸ್​ ಸೌಲಭ್ಯ ಇಲ್ಲ. ಖಾಸಗಿ ಜಮೀನಿನವರು ತಾಂಡಾಕ್ಕೆ ಆಂಬುಲೆನ್ಸ್​ ಬರಲು ಅಡ್ಡಿಪಡಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಮೃತಪಟ್ಟ ತಾಂಡಾದ ಜನರನ್ನು ತರಲು ಕಷ್ಟವಾಗುತ್ತದೆ. ತಾಂಡಾಕ್ಕೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಬೇಕಿದೆ. | ಲಕ್ಷ್ಮೀನಾರಾಯಣ ನಾಯಕ್​ ದೇಶಮಾರು ತಾಂಡಾ ರಸ್ತೆ, ಕುಡಿಯುವ ನೀರು ಸೇರಿ ಸರ್ಕಾರ ತಾಂಡಾ ನಿವಾಸಿಗಳ ಸಮಸ್ಯೆಗಳಿಗೆ ಶ್ರೀವಾಗಿ ಪರಿಹಾರ ಕಲ್ಪಿಸಬೇಕಿದೆ. | ಅಶ್ವತ್ಥನಾಯಕ್​ 10ನೇ ತರಗತಿ, ದೇಶಮಾರು ತಾಂಡಾ