ಜಿಲ್ಲೆ

ರಾಜ್ಯದಲ್ಲಿ ಕಾಂಗ್ರೆಸ್‌ನ ಚುನಾವಣಾ ಚಾಣಕ್ಯರಿಂದ ಆಡಳಿತ : ಮಾಜಿ ಎಂಎಲ್‌ಸಿ ಅರುಣ್ ಶಹಾಪುರ ಆರೋಪ

ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿಲ್ಲ, ಬದಲಿಗೆ ಕಾಂಗ್ರೆಸ್ ನೇಮಕ ಮಾಡಿಕೊಂಡಿರುವ ಚುನಾವಣಾ ಚಾಣಕ್ಯರು ಆಡಳಿತ ನಡೆಸುತ್ತಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ಆಗ್ರಹಿಸಿದರು.

ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಲುವಾಗಿ ಕಾಂಗ್ರೆಸ್ ಕೆಲವು ಚುನಾವಣಾ ಚಾಣಕ್ಯರನ್ನು ನೇಮಕ ಮಾಡಿಕೊಂ ಡಿದೆ. ಆ ಚುನಾವಣಾ ಚಾಣಕ್ಯರು ರಾಜ್ಯ ಸರ್ಕಾರವನ್ನು ಹೈಜಾಕ್ ಮಾಡಿದ್ದು, ಅವರು ಹೇಳಿದಂತೆ ರಾಜ್ಯ ಸರ್ಕಾರ ನಡೆಯುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಚುನಾವಣಾ ಚಾಣಕ್ಯರನ್ನು ರಾಜ್ಯ ಸರ್ಕಾರ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳಿಗೆ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂ ಡಿದೆ. ಈ ಸಲಹೆಗಾರರಿಗೆ ಎಷ್ಟು ವೇತನ ನೀಡಿ ನೇಮಕ ಮಾಡಿಕೊಳ್ಳಲಾಗಿದೆ ಹಾಗೂ ಅವರು ಮಾಡಿರುವ ಕೆಲಸವೇನು ಎಂಬ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಹಾಗೂ ತನಿಖೆ ನಡೆಸಬೇಕು. ಸದ್ಯದಲ್ಲಿಯೇ ಬಿಜೆಪಿ ಈ ವಿಚಾರವನ್ನು ಬಹಿರಂಗ ಪಡಿಸಲಿದೆ ಎಂದರು.